alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 7,990 ರೂ.ಗೆ ಸಿಗ್ತಿದೆ ಗ್ಯಾಲಕ್ಸಿ ಎಸ್ 9

ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಗಳ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಿದೆ. ಕಂಪನಿ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಕೂಡ ರಿಯಾಯಿತಿ ನೀಡ್ತಿದೆ. ಕಂಪನಿಯ ಪ್ರಮುಖ ಸ್ಮಾರ್ಟ್ಫೋನ್ ಗಳಲ್ಲಿ ಒಂದಾಗಿರುವ ಹಾಗೂ ಅತ್ಯುತ್ತಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಪಟ್ಟಿ ಸೇರಿರುವ ಗ್ಯಾಲಕ್ಸಿ ಎಸ್ 9 ಮೇಲೆ ಸುಮಾರು 40,000 ರಷ್ಟು ರಿಯಾಯಿತಿ ಸಿಗ್ತಿದೆ.

ಗ್ಯಾಲಕ್ಸಿ ಎಸ್ 9 ಸ್ಮಾರ್ಟ್ಫೋನ್ ಬೆಲೆ 57,990 ರೂಪಾಯಿ. ಈ ಫೋನ್ ಮೇಲೆ ಕಂಪನಿ 500 ರೂಪಾಯಿ ಕ್ಯಾಶ್ಬ್ಯಾಕ್ ನೀಡ್ತಿದೆ. ಇದ್ರ ನಂತ್ರ ಹೆಚ್ ಡಿ ಎಫ್ ಸಿ ಕಾರ್ಡ್ ದಾರರಿಗೆ 6000 ರೂಪಾಯಿ ಹೆಚ್ಚುವರಿ ಕ್ಯಾಶ್ ಬ್ಯಾಕ್ ನೀಡ್ತಿದೆ.

ಇನ್ನೊಂದು ವಿನಿಮಯ ಆಫರ್. ಇದ್ರಲ್ಲಿ ಗ್ರಾಹಕರಿಗೆ 33 ಸಾವಿರದವರೆಗೆ ರಿಯಾಯಿತಿ ಸಿಗ್ತಿದೆ. ಹಳೆ ಪೋನ್ ಬೆಲೆ ಎಷ್ಟು ಎನ್ನುವುದ್ರ ಮೇಲೆ ವಿನಿಮಯ ಬೆಲೆ ನಿರ್ಧಾರವಾಗುತ್ತದೆ. ಎಲ್ಲ ರಿಯಾಯಿತಿ ಸೇರಿ 50,000 ರೂಪಾಯಿ ರಿಯಾಯಿತಿ ಸಿಗ್ತಿದೆ. ಅಂದ್ರೆ ಎಸ್ 9, 7990 ರೂಪಾಯಿಗೆ ಗ್ರಾಹಕರಿಗೆ ಕೈ ಸೇರಲಿದೆ. ಸ್ಯಾಮ್ಸಂಗ್ 90 ದಿನಗಳಲ್ಲಿ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ನೀಡಲಿದೆ. ಗ್ಯಾಲಕ್ಸಿ ಎಸ್ 9 ಹೊರತು ಬೇರೆ ಮೊಬೈಲ್ ಗಳಿಗೆ ಕೂಡ ಕಂಪನಿ ರಿಯಾಯಿತಿ ನೀಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...