alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮುನ್ನವೇ ಬಹಿರಂಗವಾಯ್ತು ಗ್ಯಾಲಕ್ಸಿ ಒನ್8 ಬೆಲೆ

ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್8 (2018 ಮಾದರಿ) 4 ಜಿಬಿ ಹಾಗೂ 64 ಜಿಬಿ ರ್ಯಾಮ್ ನ ಫೋನ್ ಇದೇ ವಾರ ಬಿಡುಗಡೆಯಾಗಲಿದೆ. ಭಾರತದಲ್ಲಿ ಫೋನ್ ಬಿಡುಗಡೆಗೂ ಮುನ್ನವೆ ಅದ್ರ ಬೆಲೆ ಬಹಿರಂಗವಾಗಿದೆ. ಫೋನ್ ಬೆಲೆ 18 ಸಾವಿರ ರೂಪಾಯಿ ಎಂದು ಮೂಲಗಳು ಹೇಳಿವೆ.

ಗ್ಯಾಲಕ್ಸಿ ಒನ್8 ಮೊಬೈಲ್ ಫೋನ್ ಮುಂದಿನ ವಾರ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಾಗಲಿದೆ. 6 ಇಂಚು ಹೆಚ್ಡಿ  ಪ್ಲಸ್ ಸೂಪರ್ AMOLED ಡಿಸ್ಲ್ಪೇ ಜೊತೆ ಡ್ಯುಯಲ್ ರಿಯಲ್ ಕ್ಯಾಮರಾ ಹೊಂದಿರಲಿದೆ. ಈ ತಿಂಗಳ ಆರಂಭದಲ್ಲಿ ಕಂಪನಿ ಗ್ಯಾಲಕ್ಸಿ ಒನ್ 6 ಮೊಬೈಲ್ ಆನ್ಲೈನ್ ಮಾರಾಟ ಶುರು ಮಾಡಿತ್ತು.

ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಗಳಿಗೆ ಭಾರತದಲ್ಲಿ ಬಹು ಬೇಡಿಕೆಯಿದೆ. ಇತ್ತೀಚಿಗೆ ಬಿಡುಗಡೆಯಾದ ಜೆ8 ಹಾಗೂ ಜೆ6 ಮಾಡೆಲ್ ಗಳ ಮಾರಾಟ 20 ಲಕ್ಷ ಗಡಿ ಮೀರಿದೆಯಂತೆ. ಪ್ರತಿದಿನ 50 ಸಾವಿರ ಭಾರತೀಯ ಗ್ರಾಹಕರು ಸ್ಯಾಮ್ಸಂಗ್ ಮೊಬೈಲ್ ಗೆ ಆಕರ್ಷಿತರಾಗ್ತಿದ್ದಾರಂತೆ. ಗ್ಯಾಲಕ್ಸಿ ಜೆ6, ಮೇ 22 ರಂದು ಬಿಡುಗಡೆಯಾಗಿತ್ತು. ಜೆ8 ಮೊಬೈಲ್ ಜುಲೈ 1 ರಂದು ಬಿಡುಗಡೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...