alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಲರಿ ಪಡೆಯಲು ಶುರುವಾಗ್ತಿದೆ ಅಲೆದಾಟ

salaru-nove-rt

500 ಹಾಗೂ 1000 ರೂ. ನೋಟುಗಳು ಅಪಮೌಲ್ಯಗೊಂಡು 23 ದಿನಗಳಾದರೂ, ಪರಿಸ್ಥಿತಿ ಸುಧಾರಿಸಿಲ್ಲ. ದೇಶಾದ್ಯಂತ ವೇತನ ದಿನ ಸಮೀಪಿಸುತ್ತಿರುವಂತೆಯೇ ಬ್ಯಾಂಕ್, ಎ.ಟಿ.ಎಂ. ಗಳಿಗೆ ಜನ ಮುಗಿ ಬೀಳುವಂತಾಗಿದೆ.

ತಮ್ಮದೇ ಖಾತೆಯಲ್ಲಿ ಹಣವಿದ್ದರೂ, ಪಡೆದುಕೊಳ್ಳದಂತಹ ಪರಿಸ್ಥಿತಿ ಎದುರಾಗಿದೆ. ಕೆಲಸಕ್ಕೆ ಹೋಗುವ ಒತ್ತಡದ ಜೊತೆಗೆ ‘ನೋ ಕ್ಯಾಶ್’ ಬೋರ್ಡ್ ಹಾಕದ ಎ.ಟಿ.ಎಂ. ಗಳನ್ನು ಹುಡುಕುವುದು ದೊಡ್ಡ ಕೆಲಸವಾಗಿದೆ. ಇದೇ ಸಂದರ್ಭದಲ್ಲಿ ಸಂಬಳದ ದಿನ ಸಮೀಪಿಸಿದ್ದು, ಆತಂಕ ಹೆಚ್ಚುವಂತೆ ಮಾಡಿದೆ.

ಕಟ್ಟಡ ಕೆಲಸ, ಕೂಲಿ ಕಾರ್ಮಿಕರು, ಸಣ್ಣ ಕೈಗಾರಿಕೆಗಳ ಸಿಬ್ಬಂದಿ ಸೇರಿದಂತೆ ಬಹುತೇಕ ಅಸಂಘಟಿತ ವಲಯದ ಕಾರ್ಮಿಕರಿಗೆ ನಗದು ರೂಪದಲ್ಲಿಯೇ ವೇತನ ನೀಡಲಾಗುತ್ತದೆ. ಅವರಿಗೆಲ್ಲ ನೋಟ್ ಬ್ಯಾನ್ ಬಿಸಿ ತಟ್ಟಿದ್ದು, ಮನೆ ಬಾಡಿಗೆ, ಪೇಪರ್, ಹಾಲಿನ ಬಿಲ್, ಲೋನ್, ರೇಷನ್ ಮೊದಲಾದ ಅಗತ್ಯತೆಗಳಿಗೆ ಕೈಯಲ್ಲಿ ದುಡ್ಡಿಲ್ಲದಂತಾಗಿದೆ. ಇನ್ನು ಚೆಕ್ ನಲ್ಲಿ ವೇತನ ಪಡೆದುಕೊಂಡರೂ, ಬ್ಯಾಂಕ್ ಗಳಿಗೆ ಅಲೆದಾಡಬೇಕು. ಹೀಗೆ ದಿನವಿಡೀ ಬ್ಯಾಂಕ್ ಕೆಲಸಕ್ಕೆ ಹೋದರೆ, ಒಂದು ದಿನದ ಕೆಲಸ ಕಡಿತವಾಗುತ್ತದೆ. ಚೆಕ್ ಪಡೆದು ಬ್ಯಾಂಕ್ ಗೆ ಹೋದರೂ, ನಗದು ಸಮಸ್ಯೆಯಿಂದ ಹಣ ಸಿಗದಂತಹ ಪರಿಸ್ಥಿತಿ ಇದೆ.

ದೇಶಾದ್ಯಂತ ನವೆಂಬರ್ ತಿಂಗಳ ವೇತನವನ್ನು ಪಡೆಯುವ ದಿನವಾಗಿರುವುದರಿಂದ ನಗದು ಕೊರತೆ ಎದುರಾಗದಂತೆ ನೋಡಿಕೊಳ್ಳಲು ಏನೆಲ್ಲಾ ಕ್ರಮ ಕೈಗೊಳ್ಳಲಾಗಿದ್ದರೂ, ಅದು ಸಾಕಾಗುತ್ತಿಲ್ಲ. ಒಟ್ಟಾರೆ ನವೆಂಬರ್ ತಿಂಗಳ ವೇತನ ಸರಿಯಾಗಿ ಸಿಗೋದೇ ಡೌಟು ಎನ್ನುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...