alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಸೇಫಾಗಿದ್ದಾರೆ ‘ಸಾಲದ ದೊರೆ’ ಮಲ್ಯ

vijay-mallya_650x400_41461208788

ಭಾರತದಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರೋ ಉದ್ಯಮಿ ವಿಜಯ್ ಮಲ್ಯ ಅಲ್ಲಿಂದ ಕದಲಲು ಸಿದ್ಧರಿಲ್ಲ. ತಮ್ಮನ್ನ ಬ್ರಿಟನ್ ನಿಂದ ಭಾರತಕ್ಕೆ ಹಸ್ತಾಂತರ ಮಾಡಲು ಯಾವುದೇ ಅಧಿಕಾರವಿಲ್ಲ, ನಾನು ಇಲ್ಲಿಂದ ತೆರಳುವುದಿಲ್ಲ ಎನ್ನುತ್ತಿದ್ದಾರೆ.

ಎರಡು ರಾಜಕೀಯ ಪಕ್ಷಗಳ ನಡುವೆ ಸಿಕ್ಕು ತಾನು ಫುಟ್ಬಾಲ್ ನಂತಾಗಿದ್ದೇನೆ ಅಂತಾ ಪುನರುಚ್ಛರಿಸಿದ್ದಾರೆ. ವಿಜಯ್ ಮಲ್ಯ, ಫೋರ್ಸ್ ಇಂಡಿಯಾ ಫಾರ್ಮುಲಾ ವನ್ ತಂಡದ ಸಹ ಮಾಲೀಕ. ಲಂಡನ್ ನಲ್ಲಿ ನಡೆದ F1 ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ರು. 2017ರ ತಮ್ಮ ತಂಡದ ಕಾರನ್ನು ಬಿಡುಗಡೆ ಮಾಡಿದ್ರು.

ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಮಲ್ಯ ಅದನ್ನು ಮರುಪಾವತಿಸದೆ ಪಂಗನಾಮ ಹಾಕಿದ್ದಾರೆ. ಅಷ್ಟೇ ಅಲ್ಲ ಬ್ರಿಟನ್ ಗೆ ಪರಾರಿಯಾಗಿದ್ದಾರೆ. ಮಲ್ಯರನ್ನು ಹಸ್ತಾಂತರಿಸುವಂತೆ ಭಾರತ ಸರ್ಕಾರ ಈಗಾಗ್ಲೇ ಬ್ರಿಟನ್ ಗೆ ಮನವಿ ಮಾಡಿದೆ.

ಬ್ರಿಟನ್ ನಲ್ಲಿ ತಾನು ಸುರಕ್ಷಿತವಾಗಿದ್ದೇನೆ ಎನ್ನುತ್ತಿರುವ ಮಲ್ಯ, ಭಾರತ ಸರ್ಕಾರದ ಕರುಣೆ ತನಗೆ ಬೇಡ ಅಂತಾ ದರ್ಪದಿಂದ ನುಡಿದಿದ್ದಾರೆ. ಕಿಂಗ್ ಫಿಶರ್ ಏರ್ ಲೈನ್ಸ್ ವೈಫಲ್ಯಕ್ಕೆ ತಾನು ಹೊಣೆಗಾರನಲ್ಲ, ನನ್ನ ಮೇಲೆ ಯಾವುದೇ ಪ್ರಕರಣವೂ ಇಲ್ಲ ಅಂತಾ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಭಾರತದ ಮಾಧ್ಯಮಗಳ ಮೇಲೂ ಮಲ್ಯ ಹರಿಹಾಯ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...