alex Certify
ಕನ್ನಡ ದುನಿಯಾ       Mobile App
       

Kannada Duniya

ಜಪ್ತಿಯಾದ 100 ಕೋಟಿ ಹೊಸ ನೋಟು ಏನಾಗಲಿದೆ..?

cash_ukcuixmಅಲ್ಲಿ ಹೊಸ ನೋಟು ಜಪ್ತಿಯಾಯ್ತಂತೆ, ಇಲ್ಲಿ 2 ಸಾವಿರ ಮುಖ ಬೆಲೆಯ ಕೋಟಿ ರೂಪಾಯಿ ಸಿಕ್ತಂತೆ ಎನ್ನುವ ಸುದ್ದಿ ಬರ್ತಾನೆ ಇದೆ. ಆದ್ರೆ ಜಪ್ತಿಯಾದ ಈ ಹೊಸ ನೋಟುಗಳು ಎಲ್ಲಿಗೆ ಹೋಗ್ತಾ ಇವೆ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಇದಕ್ಕೆ ಜಾರಿ ನಿರ್ದೇಶನಾಲಯ ಉತ್ತರ ನೀಡಿದೆ.

ವಶಪಡಿಸಿಕೊಂಡ ಹೊಸ ನೋಟುಗಳನ್ನು ಚಲಾವಣೆಗೆ ಬಿಡುವಂತೆ ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ. ಜಾರಿ ನಿರ್ದೇಶನಾಲಯದ ಬೇರೆ ಬೇರೆ ಖಾತೆಗೆ ಹಣವನ್ನು ಜಮಾ ಮಾಡುವಂತೆ ಆದೇಶ ನೀಡಿದೆ. ಬ್ಯಾಂಕ್ ಖಾತೆಗೆ ಹೊಸ ನೋಟುಗಳನ್ನು ಜಮಾ ಮಾಡುವುದರಿಂದ ಜಪ್ತಿಯಾದ ಹೊಸ ನೋಟುಗಳು ಚಲಾವಣೆಗೆ  ಬರಲಿದ್ದು, ಜನರ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ ಎಂದು ಜಾರಿ ನಿರ್ದೇಶನಾಲಯದ ನಿರ್ದೇಶಕ ಕರ್ನಲ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ಅವರು ಸೋಮವಾರ ಸುತ್ತೋಲೆ ಹೊರಡಿಸಿದ್ದಾರೆ.

ಸಾಮಾನ್ಯವಾಗಿ ಜಪ್ತಿ ಮಾಡಿದ ನಗದು ಹಾಗೂ ಹಣವನ್ನು ಆದಾಯ ತೆರಿಗೆ ಇಲಾಖೆಯ ಲಾಕರ್ ನಲ್ಲಿ ಇಡಲಾಗುತ್ತದೆ. ಪ್ರಕರಣದ ವಿಚಾರಣೆ ಒಂದು ವರ್ಷಗಳ ಕಾಲ ನಡೆಯುವುದರಿಂದ ಭದ್ರತೆ ದೃಷ್ಟಿಯಿಂದ ಅಲ್ಲಿಡಲಾಗುತ್ತದೆ. ಆದ್ರೆ ಹೊಸ ನೋಟುಗಳ ಅಭಾವದಿಂದಾಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಈವರೆಗೆ ವಶಪಡಿಸಿಕೊಂಡಿರುವ 100 ಕೋಟಿ ಮೌಲ್ಯದ ಹೊಸ ನೋಟನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಇಡಿ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...