alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷದ ನಂತರ ಡಾಲರ್ ಎದುರು 100 ಪೈಸೆ ಏರಿಕೆ

ಮುಂಬೈ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 100 ಪೈಸೆ ಹೆಚ್ಚಳ ಕಂಡಿದೆ. ಇದು 5 ವರ್ಷದಲ್ಲೇ ಒಂದೇ ದಿನ ಆದ ಗರಿಷ್ಠ ಹೆಚ್ಚಳವಾಗಿದೆ.

ಕಚ್ಚಾ ತೈಲದ ಬೆಲೆ ದಿನೇ ದಿನೆ ಇಳಿಕೆ ಕಾಣುತ್ತಿರುವುದು ಹಾಗೂ ಇರಾನ್‌ ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಹಾಕಿದ್ದ ನಿರ್ಬಂಧ ಹಿಂತೆಗೆದುಕೊಳ್ಳುತ್ತಿರುವುದು ಪ್ರಮುಖ ಕಾರಣವಾಗಿದೆ. ಈ ಮೂಲಕ ರೂಪಾಯಿ ಮೌಲ್ಯ 72.45 ತಲುಪಿದೆ.

ಅಲ್ಲದೆ, ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದೂ ರೂಪಾಯಿ ಏರಿಕೆ ಹಿಂದಿರುವ ಪ್ರಮುಖ ಕಾರಣವಾಗಿದೆ. 2013 ರ ಸೆಪ್ಟೆಂಬರ್‌ನಲ್ಲಿ ರೂಪಾಯಿ ಮೌಲ್ಯವು ಈ ಪ್ರಮಾಣದ ಏರಿಕೆ ಕಂಡಿತ್ತು.

ಕಳೆದ ಕೆಲವು ದಿನಗಳಿಂದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗುತ್ತಲೇ ಇತ್ತು. ಇದರಿಂದ ಇಂಧನ ಮಾರುಕಟ್ಟೆ ಚೇತರಿಸಿಕೊಳ್ಳತೊಡಗಿತ್ತು. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತ ಸೇರಿದಂತೆ ಹಲವು ದೇಶಗಳಿಗೆ ಇದ್ದ ನಿರ್ಬಂಧವನ್ನು ತೆಗೆದುಹಾಕಿರುವುದು ಚೇತರಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...