alex Certify
ಕನ್ನಡ ದುನಿಯಾ       Mobile App
       

Kannada Duniya

ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ ಬೆಲೆ

ಡಾಲರ್ ಎದುರು ರೂಪಾಯಿ ಕುಸಿತ ದಾಖಲೆ ಮುರಿದಿದೆ. ಡಾಲರ್ ಎದುರು ರೂಪಾಯಿ ಬೆಲೆ 70 ರೂಪಾಯಿಯಾಗಿದೆ. ಮಂಗಳವಾರ ಬೆಳಿಗ್ಗೆ ಆರಂಭದಲ್ಲಿಯೇ 11 ಪೈಸೆ ಏರಿಕೆಯಾಗಿದ್ದು, ಡಾಲರ್ ಎದುರು ರೂಪಾಯಿ ಬೆಲೆ 70.08 ಕ್ಕೆ ಬಂದು ನಿಂತಿದೆ.

ಈ ವರ್ಷ ರೂಪಾಯಿಯಲ್ಲಿ ಶೇಕಡಾ 10 ರಷ್ಟು ಇಳಿಕೆ ಕಂಡು ಬಂದಿದೆ. ಸೋಮವಾರ ಅತಿ ಕಡಿಮೆ 69.93 ರೂಪಾಯಿಯಾಗಿತ್ತು. ಇದು ಸಾರ್ವಕಾಲಿಕ ಕುಸಿತವಾಗಿತ್ತು. ವಿಶ್ವದಲ್ಲಿ ಕರೆನ್ಸಿಯಲ್ಲಾಗ್ತಿರುವ ಏರುಪೇರು ರೂಪಾಯಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಟರ್ಕಿಯ ಕರೆನ್ಸಿ ಲಿರಾ ದಾಖಲೆ ಕುಸಿತ ಕಂಡಿದೆ. ಟರ್ಕಿಯಲ್ಲಾದ ಹಣಕಾಸು ಬಿಕ್ಕಟ್ಟು ಕರೆನ್ಸಿಗಳ ವಿನಿಮಯ ದರದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ. ಶುಕ್ರವಾರದಿಂದ ಇಲ್ಲಿಯವರೆಗೆ ಡಾಲರ್ ಎದುರು 1.09 ರಷ್ಟು ರೂಪಾಯಿ ಬೆಲೆ ಕುಸಿತವಾಗಿದೆ.

ಮಂಗಳವಾರ ಬೇರೆ ಕರೆನ್ಸಿಯಲ್ಲಿ ಕಂಡ ಬದಲಾವಣೆ ರೂಪಾಯಿ ಮೇಲೆಯೂ ಪ್ರಭಾವ ಬೀರ್ತಿದೆ. ಷೇರು ಮಾರುಕಟ್ಟೆಯ ಉತ್ತಮ ಆರಂಭ ಕೂಡ ರೂಪಾಯಿಯನ್ನು ಬೆಂಬಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...