alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದ ಕೆಲ ಗಂಟೆಗೂ ಮುನ್ನ PNB ಯಲ್ಲಿ ನಡೆದಿದೆಯಂತೆ ಭಾರೀ ಅಕ್ರಮ

ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದು, ಆತನಿಗೆ ಸಂಬಂಧಪಟ್ಟ ಆಸ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮುಂದಾಗಿದೆ.

ಈಗಾಗಲೇ ನೀರವ್ ಮೋದಿಗೆ ಸಂಬಂಧಪಟ್ಟ ಆಸ್ತಿಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದ್ದು, ನೀರವ್ ಮೋದಿ ಸಂಸ್ಥೆಯ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದೆ. ಈ ಹಿನ್ನಲೆಯಲ್ಲಿ ತನ್ನ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲವೆಂದು ಇ ಮೇಲ್ ಮೂಲಕ ತನ್ನ ಅಸಹಾಯಕತೆ ತೋಡಿಕೊಂಡಿರುವ ನೀರವ್ ಮೋದಿ, ಬೇರೆ ಕೆಲಸ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾನೆ.

ಈ ಮಧ್ಯೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿ ಪಿ) ಯ ಹಿರಿಯ ನಾಯಕ ಮಜೀದ್ ಮೆಮೋನ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಕುರಿತು ಗುರುತರ ಆರೋಪವೊಂದನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ರೂ. ನೋಟುಗಳ ಮೇಲೆ ನಿಷೇಧ ಹೇರುವ ಕೆಲ ಗಂಟೆಗಳ ಮೊದಲು ಕಮೀಷನ್ ಆಸೆಗಾಗಿ ಸುಮಾರು 90 ಕೋಟಿ ರೂ. ಗಳಷ್ಟು ಕಪ್ಪು ಹಣವನ್ನು ಈ ಬ್ಯಾಂಕ್ ಬದಲಾಯಿಸಿದೆ ಎಂದಿದ್ದಾರೆ. ಈ ಆರೋಪದಲ್ಲಿ ನಿಜವೆಷ್ಟು ಸುಳ್ಳೆಷ್ಟು ಎಂಬುದು ತನಿಖೆ ನಂತರವೇ ಬಹಿರಂಗವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...