alex Certify
ಕನ್ನಡ ದುನಿಯಾ       Mobile App
       

Kannada Duniya

30 ಲಕ್ಷಕ್ಕೆ ಹರಾಜಾಗ್ತಿದೆ 38 ವರ್ಷಗಳ ಹಿಂದಿನ ನೋಟು !

auction

1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ 1000, 5000 ಮತ್ತು 10000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಆಗ ನಿಷೇಧಿತ ನೋಟುಗಳಿಗೆ ಬಿಡಿಗಾಸಿನ ಬೆಲೆಯೂ ಇರಲಿಲ್ಲ, ಆದ್ರೀಗ 38 ವರ್ಷಗಳ ಹಿಂದಿನ ನೋಟುಗಳಿಗೆ ಬಂಪರ್ ಬೆಲೆ ಬಂದಿದೆ.

ಆಗಿನ ನೋಟುಗಳನ್ನು ಜೋಪಾನವಾಗಿಟ್ಟವರೆಲ್ಲ ಈಗ ಅದನ್ನು ಹರಾಜು ಹಾಕ್ತಿದ್ದಾರೆ. ಮರುಧರ್ ಆರ್ಟ್ಸ್ ನ ರಾಜೇಂದ್ರ ಮೇರು ನೀಡಿರುವ ಮಾಹಿತಿ ಪ್ರಕಾರ ಆಗಿನ 1 ಸಾವಿರ ರೂಪಾಯಿ ನೋಟಿಗೆ ಈಗ 2.4 ಲಕ್ಷ ರೂ. ಮೌಲ್ಯವಿದೆ. ಆದ್ರೆ 10 ಸಾವಿರ ಮತ್ತು 5 ಸಾವಿರ ರೂಪಾಯಿ ನೋಟುಗಳನ್ನು ಕೊಳ್ಳಲು ಯಾರೂ ಮುಂದಾಗಿಲ್ಲ. ಅವುಗಳನ್ನು ಖಾಸಗಿಯಾಗಿ ಮಾರಾಟ ಮಾಡಲಾಗ್ತಿದ್ದು, ಪ್ರತಿ ನೋಟಿನ ಬೆಲೆ 30 ಲಕ್ಷ ರೂಪಾಯಿ.

ನೋಟುಗಳ ಹರಾಜು ಪ್ರಕ್ರಿಯೆನ್ನು ಕಾನೂನುಬದ್ಧಗೊಳಿಸಿದ ನಂತರ 2000 ನೇ ಇಸ್ವಿಯಲ್ಲಿ ಅವುಗಳನ್ನು ಹರಾಜು ಹಾಕಲಾಗಿತ್ತು, ಆಗ ಕಡಿಮೆ ಅಂದ್ರೂ 200 ಬಿಡ್ ಗಳು ಬಂದಿವೆ. ಈಗ 1978 ರಲ್ಲಿ ಅಮಾನ್ಯಗೊಂಡಿದ್ದ ಹಳೆಯ 1 ಸಾವಿರ ರೂಪಾಯಿ ನೋಟುಗಳು 5 ಲಕ್ಷ ರೂಪಾಯಿಗೆ ಹರಾಜಾಗುವ ನಿರೀಕ್ಷೆ ಇದೆಯಂತೆ. ಇದನ್ನೆಲ್ಲ ನೋಡ್ತಾ ಇದ್ರೆ ಎಲ್ಲಾ ಹಳೆ ನೋಟುಗಳನ್ನು ಬ್ಯಾಂಕ್ ಗೆ ಕೊಡುವ ಬದಲು ಒಂದೆರಡನ್ನು ಹಾಗೇ ಇಟ್ಟುಕೊಂಡ್ರೆ ಒಳ್ಳೆಯದು ಅಂತಾ ಎಷ್ಟೋ ಜನ ಪ್ಲಾನ್ ಮಾಡ್ತಿದ್ದಾರಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...