alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದ ನವೆಂಬರ್ ನಿಂದ ಇಲ್ಲಿ ಮುದ್ರಣವೇ ಆಗಿಲ್ಲ 500 ರೂ. ನೋಟು…!

ದೇಶದಾದ್ಯಂತ ಬಹುತೇಕ ಎಟಿಎಂ ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಂಡು ಬರುತ್ತಿದ್ದು, ಸಾರ್ವಜನಿಕರು ಹಣ ಪಡೆಯಲು ಪರದಾಡುವಂತಾಗಿದೆ. 2016 ರಲ್ಲಿ ನೋಟು ನಿಷೇಧದ ಸಂದರ್ಭದಲ್ಲಿ ಕಂಡು ಬಂದ ದೃಶ್ಯವೇ ನಗದು ಇರುವ ಎಟಿಎಂ ಗಳ ಬಳಿ ಕಂಡು ಬರುತ್ತಿದ್ದು, ಕ್ಯೂ ನಿಲ್ಲುವಂತಾಗಿದೆ.

ಈ ಮಧ್ಯೆ ನಗದು ಕೊರತೆಯನ್ನು ನೀಗಿಸಲು 500 ರೂ. ನೋಟುಗಳ ಮುದ್ರಣವನ್ನು ಹೆಚ್ಚಳ ಮಾಡಲಾಗಿದ್ದು, ಕೆಲ ದಿನಗಳಲ್ಲೇ ಪರಿಸ್ಥಿತಿ ಸುಧಾರಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಈ ಮಧ್ಯೆ 500 ರೂ. ನೋಟು ಮುದ್ರಣ ಕುರಿತಂತೆ ಆಶ್ಚರ್ಯಕರ ಸಂಗತಿಯೊಂದು ಬಹಿರಂಗವಾಗಿದೆ.

ನಾಸಿಕ್ ನ ನೋಟು ಮುದ್ರಣ ಘಟಕದಲ್ಲಿ ಕಳೆದ ವರ್ಷದ ನವೆಂಬರ್ ನಿಂದ 500 ರೂ. ನೋಟುಗಳ ಮುದ್ರಣವನ್ನೇ ಮಾಡಲಾಗಿಲ್ಲ ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ. ನಾಸಿಕ್ ಘಟಕಕ್ಕೆ 2017-18 ನೇ ಸಾಲಿನಲ್ಲಿ 1,800 ಮಿಲಿಯನ್ ನೋಟುಗಳ ಮುದ್ರಣಕ್ಕೆ ಆದೇಶ ನೀಡಿದ್ದು, ಇದು ಪೂರ್ಣಗೊಂಡಿದ್ದ ಕಾರಣ 500 ರೂ. ನೋಟು ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ. ಮತ್ತೊಂದು ಮಹತ್ವದ ಸಂಗತಿಯೆಂದರೆ ನಾಸಿಕ್ ನೋಟು ಮುದ್ರಣ ಘಟಕದಲ್ಲಿ 200, 100 ಹಾಗೂ 20 ರೂ. ನೋಟುಗಳ ಮುದ್ರಣವನ್ನು ಏಪ್ರಿಲ್ 1 ರಿಂದ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದ್ದು, 10 ಹಾಗೂ 50 ರೂ. ನೋಟುಗಳನ್ನು ಮಾತ್ರ ಇಲ್ಲಿ ಮುದ್ರಿಸಲಾಗುತ್ತಿತ್ತು. ಈಗ ನಗದು ಕೊರತೆ ಎದುರಾಗಿರುವ ಹಿನ್ನಲೆಯಲ್ಲಿ ಮತ್ತೆ ಸ್ಥಗಿತಗೊಳಿಸಿದ್ದ ನೋಟುಗಳ ಮುದ್ರಣ ಆರಂಭಿಸಲಾಗಿದೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...