alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ 200 ರೂ. ನೋಟಿನಲ್ಲಿರಲಿದೆ ಈ ಎಲ್ಲ ಭದ್ರತೆ

rs-200-note-picture-real-fake

ರಾಷ್ಟ್ರದಲ್ಲಿ ಹಣದ ಬೇಡಿಕೆ ಹೆಚ್ಚಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 200 ರೂಪಾಯಿ ಮುಖಬೆಲೆಯ ನೋಟನ್ನು ಮಾರುಕಟ್ಟೆಗೆ ಬಿಡಲಿದೆ. ಈಗಾಗಲೇ ನೋಟು ಮುದ್ರಣಕ್ಕೆ ಆದೇಶ ನೀಡಲಾಗಿದೆ.

ಆರ್ ಬಿ ಐ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡಲಿರುವ 200 ರೂಪಾಯಿ ಮುಖಬೆಲೆಯ ನೋಟುಗಳು ಎಟಿಎಂನಲ್ಲಿ ಲಭ್ಯವಾಗುವುದಿಲ್ಲ. 50 ರೂಪಾಯಿ ಹಾಗೂ 10 ರೂಪಾಯಿ ನೋಟಿನಂತೆ ಬ್ಯಾಂಕ್ ಮೂಲಕವೇ 200 ರೂಪಾಯಿ ನೋಟನ್ನು ಆರ್ ಬಿ ಐ ಗ್ರಾಹಕರಿಗೆ ತಲುಪಿಸಲಿದೆ.

200 ರೂಪಾಯಿ ನೋಟುಗಳು ಈಗಾಗಲೇ ಮುದ್ರಣ ಶುರುಮಾಡಿದ್ದು, ನಕಲಿಗೆ ಆಸ್ಪದ ನೀಡದಂತೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ದೇವನಾಗರಿ ಸ್ಕ್ರಿಪ್ಟ್ : ಡಿನಾಮಿನೇಷನ್ ಸಂಖ್ಯೆ ದೇವನಾಗರಿ ಲಿಪಿಯಲ್ಲಿರಲಿದೆ.

ಸಣ್ಣ ಹೂವಿನ ಡಿಸೈನ್ ನೋಟಿನ ಮುಂದೆ, ಹಿಂದೆ ಇರಲಿದ್ದು, ಬೆಳಕಿಗೆ ಹಿಡಿದಾಗ ಮಾತ್ರ ಹೂವಿನಂತೆ ಈ ಚಿತ್ರ ಕಾಣಲಿದೆ.

ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರಾಟೈಪ್ ವಾಟರ್ ಮಾರ್ಕ್ ಇರಲಿದೆ.

ನೋಟಿನ ಬಲ ಭಾಗದಲ್ಲಿ 2 ಸಾವಿರ, 5 ನೂರು, 50, 10 ರೂಪಾಯಿ ನೋಟಿಗಿರುವಂತೆ ಲಂಬವಾಗಿ ಮಹಾತ್ಮಾಗಾಂಧಿ ಫೋಟೋ ಇರಲಿದೆ.

ಮಹಾತ್ಮ ಗಾಂಧಿಯವರ ಭಾವಚಿತ್ರ, ರಿಸರ್ವ್ ಬ್ಯಾಂಕ್ ಸೀಲ್, ಗ್ಯಾರಂಟಿ ಮತ್ತು ವಾಗ್ದಾನ ಷರತ್ತು, ಆರ್ಬಿಐ ಗವರ್ನರ್ ಸಹಿ ಎಲ್ಲವೂ ಹೊಸ ನೋಟಿನಲ್ಲಿಯೂ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...