alex Certify
ಕನ್ನಡ ದುನಿಯಾ       Mobile App
       

Kannada Duniya

ಐಟಿ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ ಕೋಟಿ ರೂ. ಬಹುಮಾನ ಯೋಜನೆ

ಜೂನ್ 1 ರಂದು ಆದಾಯ ತೆರಿಗೆ ಇಲಾಖೆ ಮಹತ್ವದ ಘೋಷಣೆಯೊಂದನ್ನು ಮಾಡಿತ್ತು. ತೆರಿಗೆ ವಂಚಕರ ಸುಳಿವು ನೀಡಿದವರಿಗೆ ಕೋಟ್ಯಾಂತರ ರೂ. ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು.

ತೆರಿಗೆ ವಂಚಿಸಿದ ನಿರ್ದಿಷ್ಟ ಪ್ರಕರಣಗಳನ್ನು ಪುರಾವೆ ಸಮೇತ ಒದಗಿಸಿದರೆ ಒಂದು ಕೋಟಿ ರೂಪಾಯಿ ಹಾಗೂ ವಿದೇಶದಲ್ಲಿ ಅನಧಿಕೃತವಾಗಿ ಹೂಡಿಕೆ ಮಾಡಿದ್ದರ ಕುರಿತು ಮಾಹಿತಿ ನೀಡಿದರೆ ಐದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು.

ಆದರೆ ಈ ಪ್ರಕಟಣೆ ಈಗ ಆದಾಯ ತೆರಿಗೆ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಕೇವಲ ಒಂದೇ ವಾರದಲ್ಲಿ ಆದಾಯ ತೆರಿಗೆ ಇಲಾಖೆ ಕಚೇರಿಗೆ 500 ಕ್ಕೂ ಅಧಿಕ ಕರೆಗಳು ಬಂದಿವೆ. ಅಷ್ಟೇ ಅಲ್ಲ, ಹಲವಾರು ದಾಖಲೆಗಳನ್ನೊಳಗೊಂಡ ಕೊರಿಯರ್ ನ ರಾಶಿ ಕಚೇರಿಗೆ ತಲುಪಿದೆ. ಜೊತೆಗೆ ನೂರಾರು ಇ-ಮೇಲ್ ಗಳು ಬಂದಿದೆ ಎನ್ನಲಾಗಿದೆ.

ತಮಗೆ ಬಂದಿರುವ ಮಾಹಿತಿಗಳೆಲ್ಲವನ್ನು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಗೆ ರವಾನಿಸಲಾಗುತ್ತಿದ್ದು, ತನಿಖೆ ಬಳಿಕವಷ್ಟೇ ಈ ಮಾಹಿತಿಗಳ ಸತ್ಯಾಂಶ ತಿಳಿದುಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...