alex Certify
ಕನ್ನಡ ದುನಿಯಾ       Mobile App
       

Kannada Duniya

ಬುಲೆಟ್ ಬೈಕ್ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ

ರಾಯಲ್ ಎನ್ ಫೀಲ್ಡ್ ತನ್ನ ಮೊದಲ ಸೆಕೆಂಡ್ ಹ್ಯಾಂಡ್ ಮೋಟಾರ್ ಸೈಕಲ್ ಸ್ಟೋರ್ ಅನ್ನು ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಆರಂಭಿಸಿದೆ. ಚೆನ್ನೈನಲ್ಲಿ ಆರಂಭವಾಗಿರುವ ವಿಂಟೇಜ್ ಸ್ಟೋರ್ ಬಳಿ, ಬಳಸಲಾಗಿರುವ ರಾಯಲ್ ಎನ್ ಫೀಲ್ಡ್ ಮೋಟಾರ್ ಬೈಕ್ ಗಳ ಮಾರಾಟಕ್ಕೆಂದೇ ಪ್ರತ್ಯೇಕ ಜಾಗ ಮೀಸಲಾಗಿದೆ. ಇಲ್ಲಿ  ಬೈಕ್ ನ ಕಾರ್ಯಕ್ಷಮತೆ ಪರೀಕ್ಷಿಸಿ ಸರ್ಟಿಫೈ ಮಾಡಲಾಗುತ್ತದೆ.

ರಾಯಲ್ ಎನ್ ಫೀಲ್ಡ್ ಸೆಕೆಂಡ್ ಹ್ಯಾಂಡ್ ಬೈಕ್ ಗಳಿಗೆ ಸಾಕಷ್ಟು ಬೇಡಿಕೆಯಿದೆ. ತಮಗೆ ಇನ್ನಷ್ಟು ಹೊಸ ಗ್ರಾಹಕರು ದೊರೆಯುತ್ತಾರೆ. ಇದರಿಂದ ನಮ್ಮ ಬ್ಯುಸಿನೆಸ್ ಇನ್ನಷ್ಟು ಬೆಳೆಯಲು ಸಹಕಾರವಾಗುತ್ತೆ. ಅಲ್ಲದೇ ಇಂತಹ 10 ವಿಂಟೇಜ್ ಸ್ಟೋರ್ ಅನ್ನು ಭಾರತದ ಬೇರೆ ಬೇರೆ ನಗರಗಳಲ್ಲಿ ತೆರೆಯಲಾಗುತ್ತದೆ ಎಂದು ಕಂಪನಿಯ ಭಾರತದ ಬ್ಯುಸಿನೆಸ್ ಹೆಡ್ ಶಾಜಿ ಕೋಶಿ ಹೇಳಿದ್ದಾರೆ.

ಇಲ್ಲಿ ಈ ಮೋಟಾರ್ ಸೈಕಲ್ ನ ಗುಣಮಟ್ಟ ಪರೀಕ್ಷೆ ಮಾಡಿ, ನವೀಕರಣಗೊಳಿಸಿ ರಿಪೇರಿಯಿದ್ದರೆ ಅದನ್ನೂ ಸಹ ತರಬೇತಿ ಹೊಂದಿದ ತಂತ್ರಜ್ಞರಿಂದ ಮಾಡಿಸಲಾಗುತ್ತದೆ ಎಂದು ರಾಯಲ್ ಎನ್ ಫೀಲ್ಡ್ ಕಂಪನಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...