alex Certify
ಕನ್ನಡ ದುನಿಯಾ       Mobile App
       

Kannada Duniya

‘ಬುಲೆಟ್’ ಪ್ರಿಯರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ

ಭಾರತದಲ್ಲಿ ಪ್ರತಿ ಹುಡುಗರ ಡ್ರೀಮ್‌ ಏನಪ್ಪಾ ಅಂತ ಕೇಳಿದ್ರೆ, ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಖರೀದಿ ಮಾಡುವುದು ಎಂದೇ ಆಗಿರುತ್ತದೆ. ಹುಡುಗರು ಅಷ್ಟೇ ಅಲ್ಲ, ಯುವತಿಯರದ್ದೂ ರಾಯಲ್‌ ಎನ್‌ಫೀಲ್ಡ್‌ ಮೇಲಿನ ಪ್ರೀತಿ ಇತ್ತೀಚೆಗೆ ಹೆಚ್ಚೇ ಆಗಿರುವುದು ಸುಳ್ಳಲ್ಲ.

ಬೇಡಿಕೆ ಹೆಚ್ಚುತ್ತಿರುವ ಬುಲೆಟ್‌ ಬೈಕ್‌ನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈವರೆಗೆ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಮಾತ್ರವೇ ಈ ತಂತ್ರಜ್ಞಾನ ಕಾಣಬಹುದಿತ್ತು.

ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ 500 ಸಿಸಿ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ನಲ್ಲಿ ಎಬಿಎಸ್‌ ಆ್ಯಂಟಿ ಲಾಕಿಂಗ್‌ ಬ್ರೇಕಿಂಗ್‌ ಸಿಸ್ಟಂನನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಕ್ಸ್‌ಶೋರೂಂ ಪ್ರೈಸ್‌ನಲ್ಲಿ ಬೈಕ್‌ನ ಬೆಲೆ 20 ರಿಂದ 30 ಸಾವಿರ ರೂ. ಹೆಚ್ಚಳವಾಗಲಿದೆ.

ಸ್ಟೆಲ್ತ್‌ ಬ್ಲಾಕ್‌, ಡೆಸರ್ಟ್‌ ಸ್ಟೋರ್ಮ್‌ ಬಣ್ಣಗಳ ಬೈಕ್‌ಗಳಿಗೆ ಮಾತ್ರ ಎಬಿಎಸ್‌ ವ್ಯವಸ್ಥೆ ಇರಲಿದ್ದು, ಕ್ರಮೇಣ ಬಿಳಿ ಬಣ್ಣದ ಬೈಕ್‌ಗಳಲ್ಲೂ ಎಬಿಎಸ್‌ ಬರಲಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಬಿಎಸ್‌ ಸಾಕಷ್ಟು ಸಮಯದ ಹಿಂದೆಯೇ ಅಳವಡಿಸಲಾಗಿತ್ತು. ಭಾರತದಲ್ಲಿ ಎನ್‌ಫೀಲ್ಡ್‌ಗೆ ಎಬಿಎಸ್‌ ಗ್ರಾಹಕರ ಆದ್ಯತೆ ಹಾಗೂ ಅವಶ್ಯಕತೆಯ ಒಂದು ಭಾಗವಾಗಿ ಗುರುತಿಸಲಾಗಿತ್ತು.

ಎಂಜಿನ್‌ ಹಾಗೂ ಇನ್ನಿತರ ಸೌಲಭ್ಯಗಳಲ್ಲಿ ಬದಲಾವಣೆ ಇರದಂತೆ, 499 ಸಿಸಿ ಸಿಂಗಲ್‌ ಸಿಲಿಂಡರ್‌, ಏರ್‌ ಕೂಲ್ಡ್‌, ಫುಯಲ್‌ ಇಂಜೆಕ್ಟೆಡ್‌ ವ್ಯವಸ್ಥೆಗಳನ್ನು ಹೊಂದಿದೆ. 5 ಸ್ಪೀಡ್‌ ಗೇರ್‌ ಬಾಕ್ಸ್‌ ನೀಡಲಾಗಿದೆ.

ಎನ್‌ಫೀಲ್ಡ್‌ನ ಮತ್ತೊಂದು ವಿಭಾಗ, ಆರ್‌ಇಗೂ ಶೀಘ್ರದಲ್ಲೇ ಎಬಿಎಸ್‌ ವ್ಯವಸ್ಥೆ ಬರಲಿದ್ದು, ಸದ್ಯ, ಬಹು ನಿರೀಕ್ಷಿತ ಇಂಟರ್ಸೆಪ್ಟರ್‌ ಹಾಗೂ ಕಾಂಟಿನೆಂಟಲ್‌ ಜಿಟಿ 650 ಬಿಡುಗಡೆಗೆ ಸಂಸ್ಥೆ ಸಿದ್ಧತೆ ನಡೆಸಿದೆ. ಜಾಗತಿಕ ಮಟ್ಟದಲ್ಲಿ ರಾಯಲ್‌ ಎನ್‌ಫೀಲ್ಡ್‌ 650 ಟ್ವಿನ್ಸ್‌ ಸೆಪ್ಟೆಂಬರ್‌ ಕೊನೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...