alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ಎನ್ಫೀಲ್ಡ್ ಡಿಸ್ಕೌಂಟ್ ಸೇಲ್ ಶುರು: ಸಿಗ್ತಿದೆ ಶೇಕಡಾ 40ರಷ್ಟು ರಿಯಾಯಿತಿ

ಮೋಟರ್ ಸೈಕಲ್ ಮೇಲೆ ರಿಯಾಯಿತಿ ನಿರೀಕ್ಷೆಯಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿ. ರಾಯಲ್ ಎನ್ಫೀಲ್ಡ್ ಎಂಡ್ ಆಫ್ ಸೀಜನ್ ಸೇಲ್ ಘೋಷಣೆ ಮಾಡಿದೆ. ಈ ಸೇಲ್ ನಲ್ಲಿ ಕಂಪನಿ ರೈಡಿಂಗ್ ಗೇರ್, ಅಪೆರಲ್ ಮತ್ತು ಎಸ್ ಸಿರೀಸ್ ಮೇಲೆ ಆಫರ್ ನೀಡ್ತಿದೆ.

ಮಾಹಿತಿ ಪ್ರಕಾರ ಕಂಪನಿ ರೈಡಿಂಗ್ ಗೇರ್ ಹಾಗೂ ಮರ್ಚಂಡೈಸ್ ಉತ್ಪನ್ನಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ನೀಡ್ತಿದೆ. ಈ ರಿಯಾಯಿತಿ ಸೀಮಿತ ಅವಧಿಗೆ ಸಿಕ್ತಿದೆ. ಗ್ರಾಹಕರು ಈ ಆಫರ್ ಲಾಭವನ್ನು ಜೂನ್ 29 ರಿಂದ ಆಗಸ್ಟ್ 15, 2018 ರವರೆಗೆ ಪಡೆಯಬಹುದಾಗಿದೆ.

ರೈಡಿಂಗ್ ಗೇರ್ ಹಾಗೂ ಮರ್ಚಂಡೈಸ್ ಉತ್ಪನ್ನಗಳನ್ನು ಖರೀದಿಗೆ ಆಸಕ್ತಿಯಿರುವ ಗ್ರಾಹಕರು ಎನ್ಫೀಲ್ಡ್ ನ ಬ್ರಾಂಡ್ ಸ್ಟಾರ್, ಡೀಲರ್ಸ್ ಹಾಗೂ ಎಕ್ಸ್ ಕ್ಲ್ಯೂಸಿವ್ ಗೇರ್ ಮಳಿಗೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಇ-ಕಾಮರ್ಸ್ ಆನ್ಲೈನ್ ವೆಬ್ಸೈಟ್ ಗಳಲ್ಲಿ ಹಾಗೂ ಎನ್ಫೀಲ್ಡ್ ಕಂಪನಿಯ ಅಧಿಕೃತ ವೆಬ್ಸೈಟ್ ನಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಎನ್ಫೀಲ್ಡ್ ನೀಡ್ತಿರುವ ಡಿಸ್ಕೌಂಟ್ ಆಫರ್ ನಲ್ಲಿ ಹೆಲ್ಮೆಟ್, ಜಾಕೆಟ್, ಶೂ, ಬೈಕ್ ಕವರ್, ಕನ್ನಡಕ, ರೇನ್ ಜಾಕೆಟ್ ಸೇರಿದಂತೆ ಕೆಲ ಉತ್ಪನ್ನಗಳು ಸೇರಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...