alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಶ್ವತವಾಗಿ ಬಂದ್ ಆಗ್ತಿದೆ ಯಾಹೂ ಮೆಸೆಂಜರ್…!

ಒಂದು ಕಾಲದ ಜನಪ್ರಿಯ ಮೆಸೆಂಜರ್ ಸರ್ವಿಸ್ ಆಗಿದ್ದ ಯಾಹೂ ಮೆಸೆಂಜರ್ ಸೇವೆ ಜುಲೈ 17 ರಿಂದ ಶಾಶ್ವತವಾಗಿ ಬಂದ್ ಆಗಲಿದೆ. ವ್ಯಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಇತರೆ ಚಾಟಿಂಗ್ ಆಪ್ ಗಳ ಸ್ಪರ್ಧೆಯನ್ನ ಎದುರಿಸಲಾಗದೆ 20 ವರ್ಷಗಳ ಯಾಹೂ ಮೆಸೆಂಜರ್ ಸೇವೆ ಶಾಶ್ವತವಾಗಿ ಲಾಗ್ ಆಫ್ ಆಗ್ತಿದೆ.

ವಿಫಲ ಯತ್ನಗಳ ನಡುವೆ ಯಾಹೂ ಮೆಸೆಂಜರ್ ಸೇವೆಯನ್ನ ನಿಲ್ಲಿಸೋದಕ್ಕೆ ನಿರ್ಧರಿಸಲಾಗಿದ್ದು ತಮ್ಮ ಚಾಟಿಂಗ್ ಹಿಸ್ಟರಿ ಡೌನ್ಲೋಡ್ ಮಾಡಿಕೊಳ್ಳೊಕೆ ಯಾಹೂ ಆರು ತಿಂಗಳ ಕಾಲಾವಕಾಶವನ್ನ ಯೂಸರ್ ಗಳಿಗೆ ನೀಡಿದೆ.

ಮಾರ್ಚ್ 9, 1998 ರಂದು ಆರಂಭವಾದ ಯಾಹೂ ಪೇಜರ್ ಜೂನ್ 21, 1999 ರಂದು ಯಾಹೂ ಮೆಸೆಂಜರ್ ಆಗಿ ಬ್ರ್ಯಾಂಡ್ ನೇಮ್ ಬದಲಿಸಿಕೊಂಡಿತು. 2001 ರಲ್ಲಿ ಯಾಹೂ 11 ಲಕ್ಷ ಯೂಸರ್ ಗಳನ್ನ ಹೊಂದಿತ್ತು. 2003ರಲ್ಲಿ 17 ಲಕ್ಷಕ್ಕೆ ಯೂಸರ್ ಗಳ  ಸಂಖ್ಯೆ ಹೆಚ್ಚಾಯ್ತು. 2006 ರಲ್ಲಿ 19 ಲಕ್ಷದಿಂದ 2009 ರಲ್ಲಿ 62 ಲಕ್ಷ ಸೇವಾದಾರರಿಗೆ ಯಾಹೂ ಸೇವೆ ವಿಸ್ತರಿಸಿತು.

2009 ರಲ್ಲಿ ಯಾಹೂ ಬಳಕೆದಾರರ ಸಂಖ್ಯೆ ಯಶಸ್ಸಿನ ಶಿಖರ ಮುಟ್ಟಿತ್ತು. 1ಕೋಟಿಯನ್ನು ದಾಟಿದ ಯಾಹೂ ಮೆಸೆಂಜರ್ ಬಳಕೆದಾರರ ಸಂಖ್ಯೆ ಆನಂತರದಲ್ಲಿ ಕುಸಿತ ಕಂಡಿತು. 2014ರಲ್ಲಿ ಗೇಮ್ಸ್ ಗಳನ್ನ ತೆಗೆದುಹಾಕಲಾಯ್ತು. 2015ರಲ್ಲಿ ಮೆಸೆಂಜರ್ ನ ಅನ್ಸೆಂಡ್ ಹೊಸ ವರ್ಷನ್ ಬಿಡುಗಡೆಯಾಯ್ತು. ಈಗ ಮೆಸೆಂಜರ್ ಶಾಶ್ವತವಾಗಿ ತನ್ನ ಸೇವೆಯನ್ನ ನಿಲ್ಲಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...