alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖೇಶ್ ಅಂಬಾನಿ ಕಂಪನಿಗೆ ಭರ್ಜರಿ ಲಾಭ

mukesh-ambani-jio-650-400_650x400_81482814909

ಮುಖೇಶ್ ಅಂಬಾನಿ ಒಡೆತನದ ರಿಲಯೆನ್ಸ್ ಇಂಡಸ್ಟ್ರೀಸ್ ಕಂಪನಿ ಭರ್ಜರಿ ಲಾಭ ಗಳಿಸಿದೆ. ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ಶೇ.12.8 ರಷ್ಟು ಹೆಚ್ಚಳವಾಗಿದೆ. ಜನವರಿಯಿಂದ ಮಾರ್ಚ್ ವರೆಗೆ ರಿಲಯೆನ್ಸ್ ಇಂಡಸ್ಟ್ರೀಸ್ 8,151 ಕೋಟಿ ರೂಪಾಯಿ ಲಾಭ ಗಳಿಸಿದೆ.

ಸಂಸ್ಥೆಯ ಆದಾಯದಲ್ಲಿ ಕೂಡ ಶೇ.38 ರಷ್ಟು ಏರಿಕೆಯಾಗಿದ್ದು, 54,189 ಕೋಟಿಯಿಂದ 74,598 ಕೋಟಿ ರೂಪಾಯಿಗೆ ತಲುಪಿದೆ. ವಾರ್ಷಿಕವಾಗಿ ರಿಲಯೆನ್ಸ್ ಇಂಡಸ್ಟ್ರೀಸ್ ಗೆ 29,901 ಕೋಟಿ ರೂಪಾಯಿ ಲಾಭವಾಗಿದೆ.

ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ನ ಭಾಗವಾಗಿರುವ ಜಿಯೋ ಟೆಲಿಕಾಂ ಚಂದಾದಾರರ ಸಂಖ್ಯೆ ಕೂಡ ದಿನೇ ದಿನೇ ಬೆಳೆಯುತ್ತಲೇ ಇದೆ. ಈಗಾಗ್ಲೇ ಜಿಯೋ ನೆಟ್ವರ್ಕ್ 108.9 ಕೋಟಿ ಗ್ರಾಹಕರನ್ನು ಸಂಪಾದಿಸಿದೆ. ಇದರೊಂದಿಗೆ ಜಿಯೋ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ನಾಲಜಿ ಕಂಪನಿ ಎನಿಸಿಕೊಂಡಿದೆ.

ದಿನಕ್ಕೆ ಸರಾಸರಿ 6 ಲಕ್ಷ ಗ್ರಾಹಕರಂತೆ, ಕೇವಲ 83 ದಿನಗಳಲ್ಲಿ ಜಿಯೋ 50 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು. 170 ದಿನಗಳಲ್ಲಿ ಗ್ರಾಹಕರ ಸಂಖ್ಯೆ 100 ಮಿಲಿಯನ್ ದಾಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...