alex Certify
ಕನ್ನಡ ದುನಿಯಾ       Mobile App
       

Kannada Duniya

ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ ಮೌಲ್ಯವೆಷ್ಟು ಗೊತ್ತಾ?

ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆ, 8 ಟ್ರಿಲಿಯನ್‌ (8 ಲಕ್ಷ ಕೋಟಿ ರೂಪಾಯಿ) ಮಾರುಕಟ್ಟೆ ಬಂಡವಾಳವನ್ನು ಹೊಂದಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಂಸ್ಥೆಯ ಶೇರು ದರ ಶೇ.1.31 ಹೆಚ್ಚಳವಾಗಿದ್ದು, 1,262.50 ರೂ. ನಲ್ಲಿ ನಿಂತಿದೆ. ರಿಲಾಯನ್ಸ್ ಜಿಯೋ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಸೆನ್ಸೆಕ್ಸ್ ನಲ್ಲಿ ಮುನ್ನಡೆ ಕಂಡಿದೆ.

ಬ್ರಾಡ್‌ ಬ್ಯಾಂಡ್‌ ಸರ್ವಿಸ್‌ ಆಗಿರುವ ಜಿಯೋ ಗಿಗಾಫೈಬರ್‌, ಜಿಯೋ ಫೋನ್‌-2ಗಳು ಮಾರುಕಟ್ಟೆಗೆ ಬಂದ ಬಳಿಕ ಹೂಡಿಕೆದಾರರು ರಿಲಾಯನ್ಸ್‌ ಶೇರು ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಅತ್ಯುತ್ತಮ ದರದಲ್ಲಿ ಉತ್ತಮ ಪ್ಲಾನ್‌ಗಳನ್ನು ನೀಡುತ್ತಿರುವುದು ಮಾರುಕಟ್ಟೆಯಲ್ಲಿ ಹೆಚ್ಚು ವಿಶ್ವಾಸ ಗಳಿಸಿಕೊಳ್ಳಲು ಸಹಕಾರಿಯಾಗಿದೆ.

ಜೂನ್‌ ತ್ರೈಮಾಸಿಕದವರೆಗೆ ಜಿಯೋಗೆ 612 ಕೋಟಿ ರೂ. ಲಾಭ ಬಂದಿರುವುದು ವರದಿಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ.19.9ರಷ್ಟು ಬೆಳವಣಿಗೆ ಸಂಸ್ಥೆ ಸಾಧಿಸಿದೆ. ಒಟ್ಟಾರೆ ಆದಾಯದಲ್ಲಿ ಶೇ.123.7 ರಷ್ಟು ಬೆಳವಣಿಗೆ ಸಾಧಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಟ್ರಾಯ್‌ ಅಂಕಿ-ಅಂಶಗಳ ಪ್ರಕಾರ ಜಿಯೋಗೆ 9.71 ದಶಲಕ್ಷ ಬಳಕೆದಾರರು ಸೇರಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...