alex Certify
ಕನ್ನಡ ದುನಿಯಾ       Mobile App
       

Kannada Duniya

ಶೇ.1 ರಷ್ಟು ಮಂದಿ ಬಳಿ ಇದೆ ವಿಶ್ವದ ಅರ್ಧ ಸಂಪತ್ತು

ವಿಶ್ವದಲ್ಲಿ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಸಿರಿವಂತರ ಸಂಪತ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೆ ಇತ್ತ ಬಡ ಜನತೆ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಇದಕ್ಕೆ ಭಾರತವೂ ಹೊರತಲ್ಲ. ವರದಿಯೊಂದರಲ್ಲಿ ವಿಶ್ವದ ಅರ್ಧದಷ್ಟು ಸಂಪತ್ತು ಶೇ.1 ರಷ್ಟು ಮಂದಿ ಬಳಿ ಇದೆ ಎಂಬ ಅಂಶ ಬಹಿರಂಗವಾಗಿದೆ.

ಶೇ.1 ರಷ್ಟು ಮಂದಿ ಹೊಂದಿರುವ ಸಂಪತ್ತಿನ ಮೊತ್ತ ಬರೋಬ್ಬರಿ 106 ಲಕ್ಷ ಕೋಟಿ ಪೌಂಡ್ ಗಳಾಗಿದ್ದು, 2008 ರ ವಿಶ್ವ ಆರ್ಥಿಕ ಬಿಕ್ಕಟ್ಟಿನ ಬಳಿಕ ಇವರುಗಳ ಸಂಪತ್ತಿನಲ್ಲಿ ಗಣನೀಯವಾಗಿ ಏರಿಕೆಯಾಗಿರುವುದು ಗಮನಾರ್ಹ.

ಸಿರಿವಂತ ದೇಶಗಳ ಪಟ್ಟಿಯಲ್ಲಿ ಸ್ವಿಜರ್ಲ್ಯಾಂಡ್ ಪ್ರಥಮ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಹಾಗೂ ಅಮೆರಿಕಾ ತೃತೀಯ ಸ್ಥಾನದಲ್ಲಿವೆ. ವರದಿಯಲ್ಲಿ ಬಹಿರಂಗವಾಗಿರುವ ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಶೇ.10 ರಷ್ಟು ಶ್ರೀಮಂತರು ವಿಶ್ವದ ಒಟ್ಟು ಸಂಪತ್ತಿನಲ್ಲಿ ಶೇ.87.8 ರಷ್ಟು ಪಾಲು ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...