alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಮತ್ತಷ್ಟು ಸಿರಿವಂತರಾಗ್ತಿದ್ದಾರೆ ಶ್ರೀಮಂತರು

ಭಾರತದಲ್ಲಿ ಆದಾಯ ಅಸಮಾನತೆ ಮಿತಿಮೀರಿದೆ. ಶೇ.50 ರಷ್ಟು ಜನರ ಒಟ್ಟಾರೆ ಆಸ್ತಿಗಿಂತ್ಲೂ ಶೇ.0.1 ರಷ್ಟು ಶ್ರೀಮಂತರ ಆಸ್ತಿ ಹೆಚ್ಚಾಗಿದೆ. 1980ರಿಂದೀಚೆಗೆ ಭಾರತದಲ್ಲಿ ಆದಾಯ ಅಸಮಾನತೆ ಹೆಚ್ಚುತ್ತಲೇ ಇದೆ ಅಂತಾ ವರದಿ ತಿಳಿಸಿದೆ. ಅದು ಇಷ್ಟೊಂದು ಉನ್ನತ ಮಟ್ಟಕ್ಕೆ ತಲುಪಿರುವುದು ಇದೇ ಮೊದಲು.

1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕ ನಂತರದ 30 ವರ್ಷಗಳಲ್ಲಿ ಆದಾಯ ಅಸಮಾನತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಕೆಳಸ್ತರದಲ್ಲಿರೋ ಶೇ.50ರಷ್ಟು ಜನರ ಆದಾಯ ಕೂಡ ವೇಗವಾಗಿ ಏರಿಕೆಯಾಗುತ್ತಿತ್ತು. ಆದ್ರೆ ಜಾಗತೀಕರಣದ ಫಲವಾಗಿ ಮತ್ತದೇ ಅಸಮಾನತೆ ಹೆಚ್ಚಾಗಿದೆ.

ಆದಾಯ ಮತ್ತು ಸಂಪತ್ತಿನ ಅಸಮಾನತೆಯ ಐತಿಹಾಸಿಕ ವಿಕಸನವನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. 2012ರಲ್ಲಿ ಭಾರತದ ಶೇ.1ರಷ್ಟು ಅತಿ ಶ್ರೀಮಂತರ ಸಂಪತ್ತು ಶೇ.22ರಷ್ಟು ಬಡಜನರ ಆದಾಯಕ್ಕೆ ಸರಿಸಮನಾಗಿತ್ತು. ಈಗ ಮತ್ತಷ್ಟು ಏರಿಕೆಯಾಗಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಬಹುತೇಕ ರಾಷ್ಟ್ರಗಳ ಸ್ಥಿತಿ ಕೂಡ ಇದೇ ರೀತಿಯಾಗಿದೆ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಚೀನಾ ಹೊರತುಪಡಿಸಿ ಬೇರೆ ದೇಶಗಳಲ್ಲಿ ಆದಾಯ ಅಸಮಾನತೆ ಇದೇ ರೀತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...