alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲೇ ಬರಲಿದೆ 20 ರೂಪಾಯಿಯ ಹೊಸ ನೋಟು

cash

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ 20 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ. 2005 ರ ಮಹಾತ್ಮ ಗಾಂಧಿ ಸಿರೀಸ್ ನ ಈ ನೋಟುಗಳ ಸಂಖ್ಯಾ ಫಲಕಗಳ ಮೇಲೆ ಎಸ್ ಎಂಬ ಅಕ್ಷರವನ್ನು ಅಳವಡಿಸಲಾಗುತ್ತದೆ.

ಅದರ ಜೊತೆಗೆ ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ ಕೂಡ ಹೊಸ 20 ರೂಪಾಯಿ ನೋಟುಗಳ ಮೇಲಿರಲಿದೆ. ಆದ್ರೆ 20 ರೂಪಾಯಿ ನೋಟಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. 2016ರಲ್ಲಿ ಮಾಡಿರುವ ವಿನ್ಯಾಸ ಹಾಗೇ ಇರಲಿದೆ. ಕಳೆದ ವರ್ಷ ಸಪ್ಟೆಂಬರ್ ನಲ್ಲಿ ಆರ್ ಎಂಬ ಅಕ್ಷರವನ್ನು ಅಳವಡಿಸಲಾಗಿತ್ತು.

ಹೊಸ ನೋಟುಗಳ ಬಿಡುಗಡೆ ಬಳಿಕವೂ ಹಳೆಯ 20 ರೂಪಾಯಿ ಚಲಾವಣೆಯಲ್ಲಿರಲಿದೆ ಅಂತಾ ಆರ್ ಬಿ ಐ ತಿಳಿಸಿದೆ. ಈಗಾಗ್ಲೇ ನೋಟುಗಳ ಮುದ್ರಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಬ್ಯಾಂಕುಗಳಿಗೆ ವಿತರಣೆಯಾಗಲಿದೆ. ಆರ್ ಬಿ ಐ ಹೊಸ 200 ರೂ. ನೋಟುಗಳನ್ನು ಕೂಡ ಬಿಡುಗಡೆ ಮಾಡಲಿದೆ ಅನ್ನೋ ಮಾಹಿತಿಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...