alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗಿರಲಿದೆ ಹೊಸ ನೂರರ ನೋಟು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ 100 ರೂಪಾಯಿ ನೋಟನ್ನು ಪರಿಚಯಿಸಿದೆ. ಮಹಾತ್ಮಾಗಾಂಧಿ (ಹೊಸ) ಸರಣಿಯ ನೂರು ರೂಪಾಯಿ ನೋಟುಗಳು ಶೀಘ್ರವೇ ಬಿಡುಗಡೆಯಾಗಲಿವೆ ಎಂದು ಗುರುವಾರ ಬ್ಯಾಂಕ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ಕೆನ್ನೇರಳೆ ಬಣ್ಣದಲ್ಲಿ ಹೊಸ ನೋಟು ಮುದ್ರಣವಾಗ್ತಿವೆ. ಆರ್ ಬಿ ಐ ನೋಟಿನ ಫೋಟೋವನ್ನೂ ಬಿಡುಗಡೆ ಮಾಡಿದೆ. ಗುಜರಾತಿನ ಇತಿಹಾಸ ಮೆಟ್ಟಿಲುಗಳಿರುವ ರಾಣಿ ಕಿ ವಾವ್ ಚಿತ್ರ ನೋಟಿನ ಹಿಂಬದಿಯಲ್ಲಿರಲಿದೆ. ಇದು ದೇಶದ ಸಂಸ್ಕೃತಿ, ಪರಂಪರೆಯನ್ನು ಹೇಳುತ್ತದೆ. ಹಳೆ ನೂರು ರೂಪಾಯಿ ನೋಟಿಗೆ ಹೋಲುವ ವಿನ್ಯಾಸದಲ್ಲಿಯೇ ಹೊಸ ನೋಟಿದೆ. ನೋಟಿನ ಸುತ್ತಳತೆ 66 ಎಂಎಂ ×144 ಎಂಎಂ ನಲ್ಲಿ ಮುದ್ರಣವಾಗಲಿದೆ.

ಹಳೆ 100 ರೂಪಾಯಿ ನೋಟುಗಳು ಬಂದ್ ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಹೊಸ ನೋಟಿನ ಜೊತೆ ಹಳೆ ನೂರು ರೂಪಾಯಿ ನೋಟುಗಳು ಚಾಲ್ತಿಯಲ್ಲಿರಲಿವೆ ಎಂದು ಆರ್ ಬಿ ಐ ಹೇಳಿದೆ. ಸಾಮಾನ್ಯವಾಗಿ ಆರ್ ಬಿ ಐ ಮುದ್ರಿಸುವ ಹೊಸ ನೋಟುಗಳು ಮಾರುಕಟ್ಟೆ ಆವರಿಸಲು ಸ್ವಲ್ಪ ಸಮಯ ಬೇಕು. ನೋಟುಗಳನ್ನು ಬ್ಯಾಂಕ್ ಗಳ ಮೂಲಕ ಆರ್ ಬಿ ಐ ಮಾರುಕಟ್ಟೆಗೆ ಬಿಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...