alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ 50 ರೂ. ಹೊಸ ನೋಟಿನ ಚಿತ್ರ…!

rs-50-note_new_759

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 50 ರೂಪಾಯಿ ಮತ್ತು 20 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಕಳೆದ ಡಿಸೆಂಬರ್ ನಲ್ಲೇ ಹೇಳಿತ್ತು. ಇಂಟಾಗ್ಲಿಯೋ ಮುದ್ರಣವಿಲ್ಲದ ಆರೋಹಣ ಗಾತ್ರದಲ್ಲಿ ಸಂಖ್ಯೆಯನ್ನು ಹೊಂದಿರೋ ನೋಟುಗಳನ್ನು ಚಲಾವಣೆಗೆ ತರುವುದಾಗಿ ಹೇಳಿತ್ತು.

ಈಗ 50 ರೂಪಾಯಿ ಹೊಸ ನೋಟುಗಳ ಚಿತ್ರ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಈ ನೋಟುಗಳು ನೀಲಿ ಬಣ್ಣದಲ್ಲಿದ್ದು, ಪ್ರಸ್ತುತ ಚಲಾವಣೆಯಲ್ಲಿರೋ ನೋಟುಗಳಿಗಿಂತ ಬಹಳ ಭಿನ್ನವಾಗಿವೆ. ಮಹಾತ್ಮಾ ಗಾಂಧಿ ಸರಣಿಯ ನೋಟುಗಳು ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿಯನ್ನು ಹೊಂದಿರಲಿವೆ.

ನೋಟು ಮುದ್ರಣ ವರ್ಷವನ್ನು ನೋಟಿನ ಹಿಂಭಾಗದಲ್ಲಿ ಪ್ರಿಂಟ್ ಮಾಡಲಾಗಿದೆ. ಆದ್ರೆ ನೋಟುಗಳ ವಿನ್ಯಾಸ ಮತ್ತು ಸೆಕ್ಯೂರಿಟಿ ಫೀಚರ್ ಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಅಂತಾ ಆರ್ ಬಿ ಐ ಹೇಳಿಕೊಂಡಿತ್ತು. ಆದ್ರೆ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರೋ ನೋಟುಗಳ ಬಣ್ಣ ಕೂಡ ಬದಲಾಗಿದೆ. ಆರ್ ಬಿ ಐ ಬಿಡುಗಡೆ ಮಾಡಲಿರೋ ಹೊಸ ನೋಟು ಇದೇನಾ ಅನ್ನೋದು ಮಾತ್ರ ಖಚಿತವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...