alex Certify
ಕನ್ನಡ ದುನಿಯಾ       Mobile App
       

Kannada Duniya

1000 ಸಿಸಿ ಎಂಜಿನ್ ನ ರೆನಾಲ್ಟ್ ಕ್ವಿಡ್ ಬಿಡುಗಡೆ

RENAULT KWIDಕಳೆದ ವರ್ಷ ಅಗ್ಗದ ಕ್ವಿಡ್ ಕಾರನ್ನು ರಸ್ತೆಗಿಳಿಸಿ ಮಾರುಕಟ್ಟೆಯಲ್ಲಿ ಹಂಗಾಮಾ ಮಾಡಿದ್ದ ರೆನಾಲ್ಟ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಇದೀಗ 1000 ಸಿಸಿ ಎಂಜಿನ್ ನ ಕ್ವಿಡ್ ಕಾರನ್ನು ಬಿಡುಗಡೆ ಮಾಡಿದೆ.

ಈ ವಿಶೇಷ ಕಾರಿಗಾಗಿ ವರ್ಷಾರಂಭದಿಂದ್ಲೇ ಎಲ್ಲರೂ ಕಾಯುತ್ತಿದ್ರು. ದೆಹಲಿಯಲ್ಲಿ ಈ ಕಾರಿನ ಬೆಲೆ 3.83 ಲಕ್ಷ ರೂಪಾಯಿಯಿಂದ 3.96 ಲಕ್ಷ ರೂಪಾಯಿವರೆಗಿದೆ. ಈ ಕಾರಿನಲ್ಲಿ ಕೆಲವು ವಿಶೇಷ ಬದಲಾವಣೆ ಮಾಡಲಾಗಿದೆ. ಕಾರಿನ ಎನ್.ವಿ.ಎಚ್, ಕ್ಲಚ್ ಮತ್ತು ಎಂಜಿನ್ ನಲ್ಲಿ ಉತ್ತಮ ಬದಲಾವಣೆ ಮಾಡಲಾಗಿದೆ. ರೆನಾಲ್ಟ್ ಕ್ವಿಡ್ ನ 1.0 ಲೀಟರ್ ನಲ್ಲಿ 3 ಸಿಲಿಂಡರ್ ಉಳ್ಳ 999 ಸಿಸಿ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಕಾರಿನ ಎಂಜಿನ್ ಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಕಂಪನಿಯ ಪ್ರಕಾರ 1 ಲೀಟರ್ ಪೆಟ್ರೋಲ್ ನಲ್ಲಿ ಈ ಕಾರು 23.01 ಕಿಮೀ ಚಲಿಸಲಿದೆ. 100 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 300 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...