alex Certify
ಕನ್ನಡ ದುನಿಯಾ       Mobile App
       

Kannada Duniya

ಸಣ್ಣ ತೆರಿಗೆ ಪಾವತಿದಾರರಿಗೊಂದು ಶುಭ ಸುದ್ದಿ

ತೆರಿಗೆ ಇಲಾಖೆ ಮತ್ತು ತೆರಿಗೆದಾರರ ನಡುವಿನ ವಿಶ್ವಾಸವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವೊಂದನ್ನ ಪ್ರಕಟಿಸಿದೆ. ದೇಶದ ನಾನಾ ನ್ಯಾಯಾಲಯಗಳಲ್ಲಿ ತೆರಿಗೆ ಇಲಾಖೆ ತೆರಿಗೆದಾರರ ಮೇಲೆ ಹೂಡಿರುವ ಉದ್ದೇಶಪೂರ್ವಕವಲ್ಲದ ತೆರಿಗೆ ಬಾಕಿಯ ಶೇಕಡಾ 41ರಷ್ಟು ಪ್ರಕರಣಗಳನ್ನ ಹಿಂಪಡೆಯೋಕೆ ನಿರ್ಧರಿಸಿದೆ. 5600 ಕೋಟಿ ರೂಪಾಯಿ ಮೌಲ್ಯದ ದಾವೆಗಳನ್ನ ತೆರಿಗೆ ಇಲಾಖೆ ವಾಪಸ್ಸು ತೆಗೆದುಕೊಳ್ಳೋಕೆ ನಿರ್ಧರಿಸಿದೆ. ಇದರಿಂದ ಸಣ್ಣ ತೆರಿಗೆದಾರರ ಮುಖದಲ್ಲಿ ಕೊಂಚ ನಿರಾಳ ಭಾವ ಮೂಡಲಿದೆ.

ತೆರಿಗೆ ವಂಚನೆಗೆ ಸಂಬಂಧಪಟ್ಟಂತ ಪ್ರಕರಣಗಳು ದೇಶದ ನಾನಾ ಕೋರ್ಟ್ ಗಳಲ್ಲಿ ಸಾಕಷ್ಟಿವೆ. ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದಲ್ಲಿ ಇರುವ ಶೇಕಡಾ 34ರಷ್ಟು ಮೊಕದ್ದಮೆಗಳನ್ನ ಕೇಂದ್ರ ವಜಾಗೊಳಿಸಲಿದೆ. ಶೇಕಡಾ 48ರಷ್ಟು ದಾವೆಗಳು ಹೈಕೋಟ್ ನಲ್ಲಿ ವಿಚಾರಣೆ ಹಂತದಲ್ಲಿವೆ. ಶೇಕಡಾ 54ರಷ್ಟು ಪ್ರಕರಣಗಳು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿವೆ. ಈಗ ಈ ಎಲ್ಲಾ ಪ್ರಕರಣಗಳನ್ನು ವಜಾಗೊಳಿಸೋಕೆ ತೆರಿಗೆ ಇಲಾಖೆ ನಿರ್ಧರಿಸಿದೆ.

10 ರಿಂದ 20 ಲಕ್ಷದ ಒಳಗಿನ ತೆರಿಗೆ ಬಾಕಿ ಪ್ರಕರಣಗಳು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣದಲ್ಲಿದೆ. 20 ಲಕ್ಷದ ಮೇಲ್ಪಟ್ಟ 50 ಲಕ್ಷದ ಒಳಗಿನ ತೆರಿಗೆ ಬಾಕಿ ಪ್ರಕರಣಗಳು ಹೈಕೋರ್ಟ್ನಲ್ಲಿವೆ. 1 ಕೋಟಿಗೂ ಮೀರಿದ ತೆರಿಗೆ ವಂಚನೆ ಪ್ರಕರಣಗಳನ್ನ ಸುಪ್ರೀಂಕೋರ್ಟ್ನ ಕಣ್ಗಾವಲಿನಲ್ಲಿವೆ. ಕೇಂದ್ರದ ನಿರ್ಧಾರದಿಂದ ಕೆಲ ಸಣ್ಣ, ಮಧ್ಯಮ ಪ್ರಾಮಾಣಿಕ ತೆರಿಗೆದಾರರಿಗೆ ಅನುಕೂಲವಾಗಲಿದೆ.

ಕೆಲ ಷರತ್ತು ಮತ್ತು ನಿಬಂಧನೆಗಳ ಆಧಾರದಲ್ಲಿ ತೆರಿಗೆ ಇಲಾಖೆ ಈ ಪ್ರಕರಣಗಳನ್ನ ಹಿಂಪಡೆದುಕೊಳ್ತಿದೆ. ಬಹುಮುಖ್ಯವಾಗಿ ಬಾಕಿ ಸಂದಾಯವಾಗಬೇಕಾಗಿರುವ ತೆರಿಗೆಗಿಂತ ದಾವೆಯ ಮೊತ್ತ ಹೆಚ್ಚಿರುವ ಪ್ರಕರಣಗಳನ್ನ ಹಿಂಪಡೆಯೋಕೆ ತೆರಿಗೆ ಇಲಾಖೆ ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...