alex Certify
ಕನ್ನಡ ದುನಿಯಾ       Mobile App
       

Kannada Duniya

ಮುಕೇಶ್ ಅಂಬಾನಿಯ ದಿನನಿತ್ಯದ ಆದಾಯ ಕೇಳಿದ್ರೆ ದಂಗಾಗ್ತಿರಾ…!

ದೇಶದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿಯವರ ಪ್ರತಿ ದಿನದ ಆದಾಯ ವಿವರವನ್ನು ಬಾರ್ ಕ್ಲೇಸ್ ಹುರಾನ್ ಇಂಡಿಯಾ ಎಂಬ ಸಂಸ್ಥೆ ಬಹಿರಂಗಪಡಿಸಿದ್ದು, ಇದನ್ನು ಕೇಳಿದರೆ ಶ್ರೀಸಾಮಾನ್ಯರು ದಂಗಾಗುತ್ತಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿರುವ ಮುಕೇಶ್ ಅಂಬಾನಿ, ಕಳೆದ ಒಂದು ವರ್ಷದಿಂದೀಚೆಗೆ ಪ್ರತಿದಿನ 300 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ. ಮುಕೇಶ್ ಅಂಬಾನಿಯವರ ಒಟ್ಟು ಸಂಪತ್ತು 3,71,000 ಕೋಟಿ ರೂಪಾಯಿಗಳಾಗಿದ್ದು, ಸತತ 7 ವರ್ಷಗಳಿಂದ ಭಾರತದ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ಎಸ್.ಪಿ. ಹಿಂದುಜಾ ಕುಟುಂಬವಿದ್ದು, ಇವರ ಒಟ್ಟು ಸಂಪತ್ತು 1,59,000 ಕೋಟಿ ರೂಪಾಯಿಗಳಾಗಿದೆ. ತೃತೀಯ ಸ್ಥಾನದಲ್ಲಿರುವ ಎಲ್.ಎನ್. ಮಿತ್ತಲ್ ಕುಟುಂಬ 1,14,500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ. ನಂತರದ ಸ್ಥಾನದಲ್ಲಿ ಅಜೀಂ ಪ್ರೇಮ್ ಜಿ ಇದ್ದು, ಇವರ ಆಸ್ತಿ 96,100 ಕೋಟಿ ರೂಪಾಯಿಗಳಾಗಿದೆ.

ಭಾರತದ ಶ್ರೀಮಂತರ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ಸನ್ ಫಾರ್ಮಾದ ದಿಲೀಪ್ ಸಾಂಗ್ವಿ ಅವರ ಆಸ್ತಿ ಮೌಲ್ಯ 89,700 ಕೋಟಿ ರೂಪಾಯಿಗಳಾಗಿದೆ. ಉದಯ್‌ ಕೋಟಕ್‌ 78,600 ಕೋಟಿ ರೂ. ಆಸ್ತಿಯೊಂದಿಗೆ ಆರನೇ, ಸೈರಸ್‌ ಎಸ್‌ ಪೂನಾವಾಲಾ 73,000 ಕೋಟಿ ರೂ. ಆಸ್ತಿಯೊಂದಿಗೆ ಏಳನೇ, ಗೌತಮ್‌ ಅದಾನಿ 71,200 ಕೋಟಿ ರೂ. ಆಸ್ತಿಯೊಂದಿಗೆ ಎಂಟನೇ, ಸೈರಸ್‌ ಪಲ್ಲೋಂಜಿ ಮಿಸ್ತ್ರಿ 69,400 ಕೋಟಿ ರೂ. ಆಸ್ತಿಯೊಂದಿಗೆ ಒಂಬತ್ತನೇ ಹಾಗೂ ಶಾಪೋರ್‌ ಪಲ್ಲೋಂಜಿ ಮಿಸ್ತ್ರಿ 69,400 ಕೋಟಿ ರೂ. ಆಸ್ತಿಯೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...