alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಬಲ್ ಟಿವಿ ಗ್ರಾಹಕರಿಗೆ ಶೀಘ್ರದಲ್ಲೇ ಸಿಗಲಿದೆ ಭರ್ಜರಿ ಗುಡ್ ನ್ಯೂಸ್…!

ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಎರಡು ಅತಿ ದೊಡ್ಡ ಕೇಬಲ್ ಟಿವಿ ಮತ್ತು ಬ್ರಾಡ್ ಬಾಂಡ್ ಕಂಪನಿಗಳಾದ ಹಾಥ್ವೇ ಕೇಬಲ್ ಆಂಡ್ ಡಾಟಾಕಾಂ ಮತ್ತು ಡೆನ್ ನೆಟ್ ವರ್ಕ್ ಸಂಸ್ಥೆಗಳಲ್ಲಿ ಹಣ ಹೂಡಲು ಆಸಕ್ತಿ ತೋರಿದೆ. ಇದಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಸುಮಾರು 5230 ಕೋಟಿ ರೂ. ನಷ್ಟು ಭಾರೀ ಮೊತ್ತವನ್ನು ವ್ಯಯ ಮಾಡುತ್ತಿದೆ.

ಹಾಥ್ವೇನಲ್ಲಿ ಶೇ.51.3 ಸ್ಟೇಕ್ ಗಳನ್ನು ಪಡೆಯಲಿರುವ ರಿಲಯನ್ಸ್ ಸಂಸ್ಥೆ ಇದಕ್ಕಾಗಿ 2940 ಕೋಟಿ ರೂ. ಹೂಡಿಕೆ ಮಾಡಲಿದೆ. ಇದೇ ವೇಳೆ ಡೆನ್ ನಲ್ಲಿ 2045 ಕೋಟಿ ರೂ. ಗಳನ್ನು ಹೂಡಿರುವ ಮುಕೇಶ್ ಅಂಬಾನಿ ಕಂಪನಿ ಶೇ.66 ಸ್ಟೇಕ್ ಗಳನ್ನು ತನ್ನದಾಗಿಸಿಕೊಂಡಿದೆ.

ಬಲಿಷ್ಟವಾಗಿರುವ ಪ್ರಾದೇಶಿಕ ಎಂಎಸ್ಒ (ಮಲ್ಟಿಪಲ್ ಸಿಸ್ಟಂ ಆಪರೇಟರ್ಸ್) ಗಳ ಮೇಲೆ ಹಿಡಿತ ಸಾಧಿಸುವುದು ರಿಲಯನ್ಸ್ ಗೇಮ್ ಪ್ಲಾನ್ ಗಳಲ್ಲಿ ಒಂದಾಗಿದೆ. ಈ ಪಾಲುದಾರಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ಹಾಥ್ವೇ, ಡೆನ್ ಕಂಪನಿಗಳಿಗೂ ಸ್ಪರ್ಧಾತ್ಮಕ ಯುಗದಲ್ಲಿ ಮುನ್ನಡೆಯಲು ಅಗತ್ಯವಿರುವ ಬಂಡವಾಳ ಕ್ರೋಡೀಕರಣ ಸಾಧ್ಯವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...