alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಗಡ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಜಿಯೋ ಫೋನ್

ರಿಲಾಯನ್ಸ್ 4ಜಿ ಜಿಯೋ ಫೋನ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದೆ. ಕಂಪನಿ ಪ್ರಕಾರ ಮೊದಲ ದಿನವೇ 60 ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಫೀಚರ್ ಫೋನ್ ಬುಕ್ಕಿಂಗ್ ಮಾಡಿದ್ದಾರಂತೆ. ಸುಮಾರು 1 ಕೋಟಿಗೂ ಹೆಚ್ಚು ಮಂದಿ ಜಿಯೋ ಫೀಚರ್ ಫೋನ್ ಪಡೆಯಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಜಿಯೋ ಫೋನ್ ಬೀಟಾ ಟೆಸ್ಟಿಂಗ್ ಆಗಸ್ಟ್ 15ರಿಂದ ಹಾಗೂ ಮುಂಗಡ ಬುಕ್ಕಿಂಗ್ ಆಗಸ್ಟ್ 24ರಿಂದ ಶುರುವಾಗಿದೆ. ಮುಂಗಡ ಬುಕ್ಕಿಂಗ್ ಶುರುವಾದ ಮೊದಲ ದಿನವೇ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ ಆಗಿದೆ. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಗ್ರಾಹಕರು ಸಮ ಪ್ರಮಾಣದಲ್ಲಿ ತಮ್ಮ ಆಸಕ್ತಿ ತೋರಿದ್ದಾರೆ. ಸದ್ಯ ಮುಂಗಡ ಬುಕ್ಕಿಂಗ್ ರದ್ದು ಮಾಡಲಾಗಿದೆ.  ಮುಂಗಡ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಶೀಘ್ರದಲ್ಲಿಯೇ ಫೋನ್ ಸಿಗಲಿದೆ. ಆ ನಂತ್ರ ಮತ್ತೆ ಬುಕ್ಕಿಂಗ್ ಗೆ ಅವಕಾಶ ನೀಡುವುದಾಗಿ ಕಂಪನಿ ಹೇಳಿದೆ.

ರಿಲಾಯನ್ಸ್ ಜಿಯೋ ಫೀಚರ್ ಫೋನ್ ಸಾಕಷ್ಟು ವಿಶಿಷ್ಟತೆಗಳನ್ನು ಹೊಂದಿದೆ. ಫೋನ್ ಉಚಿತವಾಗಿ ಗ್ರಾಹಕರ ಕೈ ಸೇರಲಿದೆ. ಭದ್ರತೆ ದೃಷ್ಟಿಯಿಂದ 1500 ರೂಪಾಯಿ ನೀಡಬೇಕು. ಆದ್ರೆ ಕಂಪನಿ ಈ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...