alex Certify
ಕನ್ನಡ ದುನಿಯಾ       Mobile App
       

Kannada Duniya

ಚಾರ್ಜಿಂಗ್ ವೇಳೆ ಸ್ಫೋಟಗೊಂಡ್ತು ಜಿಯೋ ಫೋನ್

ಜಿಯೋ ಫೀಚರ್ ಫೋನ್ ಬುಕ್ ಮಾಡಿದ ಎಲ್ಲ ಗ್ರಾಹಕರ ಕೈಗೆ ಇನ್ನೂ ಫೋನ್ ಸಿಕ್ಕಿಲ್ಲ. ಆಗ್ಲೇ ಜಿಯೋ ಫೀಚರ್ ಫೋನ್ ಬ್ಯಾಟರಿ ಸ್ಫೋಟಗೊಂಡ ಘಟನೆ ಬೆಳಕಿಗೆ ಬಂದಿದೆ. ಕಾಶ್ಮೀರದಲ್ಲಿ ಜಿಯೋ ಫೀಚರ್ ಫೋನ್ ಬ್ಯಾಟರಿ ಸ್ಫೋಟಗೊಂಡಿದೆ. ಈ ಬಗ್ಗೆ ಕಂಪನಿ ಅಧಿಕೃತ ಹೇಳಿಕೆ ನೀಡಿಲ್ಲ.

ವರದಿ ಪ್ರಕಾರ, ಫೋನ್ ನ ಹಿಂಭಾಗ ಸಂಪೂರ್ಣವಾಗಿ ಮೆಲ್ಟ್ ಆಗಿದೆ. ಮುಂಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಇದ್ರ ಫೋಟೋ ಕೂಡ ವೈರಲ್ ಆಗಿದೆ. ಫೋನ್ ಚಾರ್ಜ್ ಗಿಟ್ಟ ವೇಳೆ ಸ್ಫೋಟಗೊಂಡಿದೆ ಎನ್ನಲಾಗ್ತಿದೆ. ಎಲ್ಲ ಫೋನ್ ನಂತೆಯೇ ಜಿಯೋ ಫೀಚರ್ ಫೋನ್ ನಲ್ಲಿ ಕೂಡ 2000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.

ಜಿಯೋ ಫೋನ್ LFY ಫೋನಿನ ಭಾಗವಾಗಿದೆ. ಹಿಂದಿನ ವರ್ಷ LFY ವಾಟರ್ 1 ಫೋನ್ ಸ್ಫೋಟಗೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಉದ್ದೇಶಪೂರ್ವಕವಾಗಿ ಜಿಯೋ ಫೋನ್ ಬ್ಯಾಟರಿ ಸ್ಫೋಟಗೊಳಿಸಲಾಗಿದೆ ಎಂಬ ಮಾಹಿತಿಯೂ ಇದೆ. ಈ ಹಿಂದೆ ಟ್ವೀಟರ್ ಅಕೌಂಟ್ ನಲ್ಲಿ ಫೋನ್ ಸ್ಫೋಟಗೊಂಡ ಫೋಟೋ ಹಾಕಲಾಗಿತ್ತು. ಆದ್ರೀಗ ಫೋಟೋ ಡಿಲೀಟ್ ಆಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಸ್ಫೋಟ ಘಟನೆ ಬಗ್ಗೆ ಜಿಯೋ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸುಮಾರು 60 ಲಕ್ಷ ಗ್ರಾಹಕರು ಜಿಯೋ ಫೀಚರ್ ಫೋನ್ ಖರೀದಿಗೆ ಮುಂದಾಗಿದ್ದಾರೆ. ಅಕ್ಟೋಬರ್ ತಿಂಗಳ ಕೊನೆ ಅಥವಾ ನವೆಂಬರ್ ಆರಂಭದಲ್ಲಿ ಮತ್ತೆ ಮುಂಗಡ ಬುಕ್ಕಿಂಗ್ ಶುರುವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...