alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ಇಲ್ಲಿಯೂ ಲಭ್ಯವಾಗುತ್ತಿದೆ ಉಚಿತ 4ಜಿ ಫೋನ್

ಇದುವರೆಗೂ ರಿಲಯನ್ಸ್ ಅಧಿಕೃತ ವೆಬ್ ಸೈಟ್ ಹಾಗೂ ಆಪ್ ಮೂಲಕ ಬುಕ್ ಮಾಡಿದವರಿಗೆ ಮಾತ್ರ ಸಿಗುತ್ತಿದ್ದ ರಿಲಯನ್ಸ್ ಜಿಯೋ ಫೋನ್ ಈಗ ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ನಲ್ಲೂ ಲಭ್ಯವಾಗುತ್ತಿದೆ.

ಠೇವಣಿ ಕಟ್ಟಿದ ಬಳಿಕ ಉಚಿತವಾಗಿ ಲಭ್ಯವಾಗುವ ಈ ಫೋನ್ ಒಂದೊಮ್ಮೆ ಇಷ್ಟವಾಗದಿದ್ದಲ್ಲಿ ಮೂರು ವರ್ಷಗಳ ಬಳಿಕ ಕಾರ್ಯ ನಿರ್ವಹಿಸುತ್ತಿರುವ ಸ್ಥಿತಿಯಲ್ಲಿರುವ ಫೋನ್ ಮರಳಿಸಿದರೆ ಠೇವಣಿ ಹಣವನ್ನು ಸಂಪೂರ್ಣವಾಗಿ ಮರಳಿಸಲಾಗುತ್ತದೆ.

ಉಚಿತವಾಗಿರುವ ಈ 4ಜಿ ಹ್ಯಾಂಡ್ ಸೆಟ್ ಗೆ 1500 ರೂ. ಠೇವಣಿ ಹಣವನ್ನು ಪಡೆಯಲಾಗುತ್ತಿದ್ದು, ಫೆಬ್ರವರಿ 16 ರಿಂದ 28 ರವರೆಗೆ ಅಮೆಜಾನ್ ನಲ್ಲಿ ಖರೀದಿಸುವ ಗ್ರಾಹಕರಿಗೆ ಕ್ಯಾಶ್ ಆನ್ ಡೆಲಿವರಿ ಜೊತೆಗೆ 50 ರೂ. ಗಳ ಕ್ಯಾಶ್ ಬ್ಯಾಕ್ ಆಫರ್ ಕೂಡಾ ಲಭ್ಯವಾಗಲಿದೆ. ರಿಲಯನ್ಸ್ ಜಿಯೋ 4ಜಿ ಹ್ಯಾಂಡ್ ಸೆಟ್ ನಲ್ಲಿ ಹಲವಾರು ಫೀಚರ್ ಗಳಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...