alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಬಾಂಬ್ ಸಿಡಿಸಲು ಸಿದ್ಧವಾಗ್ತಿದೆ ಜಿಯೋ : ಆರಂಭದಲ್ಲಿ ಸಿಗ್ತಿದೆ 300 ಜಿಬಿ ಡೇಟಾ

ಟೆಲಿಕಾಂ ಸೆಕ್ಟರ್ ನಲ್ಲಿ ಬಾಂಬ್ ಸಿಡಿಸಿದ್ದ ರಿಲಾಯನ್ಸ್ ಜಿಯೋ ಈಗ ಇಂಟರ್ನೆಟ್ ಕ್ಷೇತ್ರದಲ್ಲಿ ಕ್ರಾಂತಿಗೆ ಮುಂದಾಗಿದೆ. 2017ನ್ನು ತನ್ನ ಕೈವಶ ಮಾಡಿಕೊಂಡಿದ್ದ ಜಿಯೋ 2018ರಲ್ಲಿಯೂ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಜಿಯೋ ತನ್ನ ಅಗ್ಗದ ಬ್ರಾಡ್ಬ್ಯಾಂಡ್ ನೆಟ್ವರ್ಕ್ JioFiber ಬಿಡುಗಡೆ ಮಾಡಿ ಭಾರತದ ಇಂಟರ್ನೆಟ್ ಸೇವೆಯಲ್ಲಿ ಕ್ರಾಂತಿ ಮಾಡುವ ಸಾಧ್ಯತೆಯಿದೆ.

JioFiber ನಲ್ಲಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಹೈ ಸ್ಪೀಡ್ ಸೇವೆ ಲಭ್ಯವಾಗಲಿದೆ. ಇದ್ರ ಡೇಟಾ ಸ್ಪೀಡ್ 1ಜಿಬಿಪಿಎಸ್ ಆಗಲಿದೆ. ಈ ಸೇವೆ ಬಿಡುಗಡೆ ದಿನಾಂಕ ನಿಗಧಿಯಾಗಿಲ್ಲ. ಮಾರ್ಚ್ ಅಂತ್ಯದೊಳಗೆ ಈ ಸೇವೆ ಗ್ರಾಹಕರಿಗೆ ಲಭ್ಯವಾಗಬಹುದೆಂದು ಅಂದಾಜಿಸಲಾಗಿದೆ.

ಜಿಯೋ ತನ್ನ JioFiber ಸೇವೆಯನ್ನು ದೇಶದ 10 ನಗರಗಳಿಗೆ ನೀಡ್ತಿದೆ. ಸೂರತ್, ಮುಂಬೈ, ಅಹಮದಾಬಾದ್, ವಡೋದರ, ದೆಹಲಿ ಎನ್ಸಿಆರ್, ಹೈದರಾಬಾದ್ ಮತ್ತು ಜಾಮ್ನಗರ್ ದ ಕೆಲವು ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆಗಳನ್ನು ಕಂಪನಿ ಪರೀಕ್ಷಿಸುತ್ತಿದೆ. ಪರೀಕ್ಷೆ ಅವಧಿಯಲ್ಲಿ ಗ್ರಾಹಕರಿಗೆ ತಿಂಗಳಿಗೆ 100 ಜಿಬಿಯಂತೆ ಮೂರು ತಿಂಗಳು ಉಚಿತ ಡೇಟಾ ಸಿಗ್ತಿದೆ. JioFiber ಪ್ರಿವ್ಯೂ ಆಫರ್ ಹೆಸರಿನಲ್ಲಿ ಇದನ್ನು ನೀಡಲಾಗ್ತಿದ್ದು, ಈ ಆಫರ್ ವಿಸ್ತರಣೆಯಾಗುವ ಸಾಧ್ಯತೆಯೂ ಇದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...