alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ್ಯಾವ ಮೊಬೈಲ್ ಕಂಪನಿ ಏನೇನು ಆಫರ್ ನೀಡ್ತಿದೆ?

jio

ರಿಲಯೆನ್ಸ್ ಜಿಯೋ ಲಾಂಚ್ ಆದಾಗಿನಿಂದ್ಲೂ ಉಳಿದ ಟೆಲಿಕಾಂ ಕಂಪನಿಗಳಿಗೆ ನಿದ್ದೆಯಿಲ್ಲ. ಜಿಯೋಗೆ ಟಕ್ಕರ್ ಕೊಡಲು ಯಾವ ಪ್ಲಾನ್ ಮಾಡೋದು ಅನ್ನೋ ತಲೆಬಿಸಿ. ಆದ್ರೆ ಗ್ರಾಹಕರಿಗೆ ಮಾತ್ರ ಜಿಯೋನಿಂದಾಗಿ ಬಂಪರ್ ಆಫರ್ ಸಿಕ್ತಾ ಇದೆ. ಜಿಯೋ ಮಾರ್ಚ್ 31 ರವರೆಗೆ ತನ್ನ ವೆಲ್ಕಮ್ ಆಫರ್ ವಿಸ್ತರಿಸಿರೋದ್ರಿಂದ ಏರ್ಟೆಲ್, ವೊಡಾಫೋನ್ ಹಾಗೂ ಐಡಿಯಾ ಕೂಡ ಪೋಸ್ಟ್ ಪೇಯ್ಡ್ ಅನ್ ಲಿಮಿಟೆಡ್ ಕಾಲ್ ಆಫರ್ ನೀಡುತ್ತಿವೆ.

ಏರ್ಟೆಲ್ ಅನ್ ಲಿಮಿಟೆಡ್ ಕಾಲಿಂಗ್ ಕೊಡುಗೆ : ‘ಮೈಪ್ಲಾನ್ ಇನ್ಫಿನಿಟಿ’ ಹೆಸರಿನ ಈ ಪ್ಲಾನ್ ನಲ್ಲಿ ಉಚಿತ ಅನ್ ಲಿಮಿಟೆಡ್ ಕರೆ ಮಾಡಬಹುದು, ಆಫರ್ ಆರಂಭವಾಗುವುದು 799 ರೂಪಾಯಿಯಿಂದ. ಬಳಕೆದಾರರಿಗೆ ಸ್ಥಳೀಯ, ಎಸ್ಟಿಡಿ ಕರೆಗಳು, ಪ್ರತಿದಿನ 100 ಎಸ್ ಎಂ ಎಸ್, 2 ಜಿಬಿ 4ಜಿ/3ಜಿ ಡೇಟಾ ಹಾಗೂ ವಿಂಕ್ ಮ್ಯೂಸಿಕ್, ವಿಂಕ್ ಮೂವೀಸ್ ಗೆ ಉಚಿತ ಸಬ್ ಸ್ಕ್ರಿಪ್ಷನ್ ದೊರೆಯಲಿದೆ. ಆದ್ರೆ ಅನ್ ಲಿಮಿಟೆಡ್ ರೋಮಿಂಗ್ ಫ್ರೀ ಕೊಡುಗೆ ಇಲ್ಲ.

1,199 ರೂಪಾಯಿಯ ಪ್ಲಾನ್ ನಲ್ಲಿ ಮೇಲಿನ ಎಲ್ಲಾ ಕೊಡುಗೆಗಳ ಜೊತೆಗೆ ರೋಮಿಂಗ್ ಇದೆ. ಜೊತೆಗೆ 5 ಜಿಬಿ 3ಜಿ/4ಜಿ ಡೇಟಾ ಸಿಗಲಿದೆ.

1,599 ರೂಪಾಯಿಯ ಪ್ಲಾನ್ ನಲ್ಲಿ ಮೇಲಿನ ಎಲ್ಲಾ ಕೊಡುಗೆಗಳ ಜೊತೆಗೆ ರೋಮಿಂಗ್ ಇದೆ. ಜೊತೆಗೆ 10 ಜಿಬಿ 3ಜಿ/4ಜಿ ಡೇಟಾ ಸಿಗಲಿದೆ.

1,999 ರೂಪಾಯಿಯ ಪ್ಲಾನ್ ನಲ್ಲಿ ಮೇಲಿನ ಎಲ್ಲಾ ಕೊಡುಗೆಗಳ ಜೊತೆಗೆ ರೋಮಿಂಗ್ ಇದೆ. ಜೊತೆಗೆ 15 ಜಿಬಿ 3ಜಿ/4ಜಿ ಡೇಟಾ ಸಿಗಲಿದೆ.

2,999 ರೂಪಾಯಿಯ ಪ್ಲಾನ್ ನಲ್ಲಿ ಮೇಲಿನ ಎಲ್ಲಾ ಕೊಡುಗೆಗಳ ಜೊತೆಗೆ ರೋಮಿಂಗ್ ಇದೆ. ಜೊತೆಗೆ 30 ಜಿಬಿ 3ಜಿ/4ಜಿ ಡೇಟಾ ಸಿಗಲಿದೆ. ಅದಕ್ಕಿಂತ ಜಾಸ್ತಿ ಬಳಸಿದ್ರೆ ಪ್ರತಿ ಎಂಬಿಗೆ 50 ಪೈಸೆಯಂತೆ ಚಾರ್ಜ್ ಮಾಡಲಾಗುತ್ತದೆ.

ವೊಡಾಫೋನ್ ಅನ್ ಲಿಮಿಟೆಡ್ ಕಾಲಿಂಗ್ ಆಫರ್ : ಈ ‘ವೊಡಾಫೋನ್ ರೆಡ್’ ಪ್ಲಾನ್ ಆರಂಭವಾಗೋದು 1,699 ರೂಪಾಯಿಯಿಂದ. ಇದರಲ್ಲಿ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ರೋಮಿಂಗ್ ನಲ್ಲಿ ಇನ್ ಕಮಿಂಗ್ ಉಚಿತ, 500 ಎಸ್ ಎಂ ಎಸ್, 12 ಜಿಬಿ ಡೇಟಾ ದೊರೆಯಲಿದೆ. ರೋಮಿಂಗ್ ಔಟ್ ಗೋಯಿಂಗ್ ಕರೆಗಳಿಗೆ ಪ್ರತಿನಿಮಿಷಕ್ಕೆ 50 ಪೈಸೆ ಚಾರ್ಜ್ ಮಾಡಲಾಗುತ್ತದೆ.

1999 ರೂಪಾಯಿ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಅನ್ ಲಿಮಿಟೆಡ್ ರೋಮಿಂಗ್ ಕರೆ, 500 ಎಸ್ ಎಂ ಎಸ್ ಹಾಗೂ 16 ಜಿಬಿ ಡೇಟಾ ದೊರೆಯಲಿದೆ.

ವೊಡಾಫೋನ್ ರೆಡ್ 1299 ರೂಪಾಯಿ ಪ್ಲಾನ್ ಅನ್ ಲಿಮಿಟೆಡ್ ಅಲ್ಲ, 3000 ನಿಮಿಷ ಸ್ಥಳೀಯ ಹಾಗೂ ಎಸ್ಟಿಡಿ ಕರೆ, 500 ಎಸ್ ಎಂ ಎಸ್ ಹಾಗೂ 8 ಜಿಬಿ ಡೇಟಾ ದೊರೆಯಲಿದೆ.

ಐಡಿಯಾ ಅನ್ ಲಿಮಿಟೆಡ್ ಕಾಲಿಂಗ್ ಆಫರ್ : ಉಳಿದ ಕಂಪನಿಗಳಂತೆ ಐಡಿಯಾದಲ್ಲಿ 4 ಜಿ ಇಲ್ಲ, ಕೇವಲ 3 ಜಿ ಡೇಟಾ ದೊರೆಯಲಿದೆ. ಐಡಿಯಾ 1,199 ರೂಪಾಯಿ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, ಅನ್ ಲಿಮಿಟೆಡ್ ರೋಮಿಂಗ್ ಕರೆ, 5 ಜಿಬಿ 3ಜಿ ಡೇಟಾ ಹಾಗೂ 3000 ಎಸ್ ಎಂ ಎಸ್ ಲಭ್ಯವಿದೆ.

ಐಡಿಯಾ 1,599 ರೂಪಾಯಿ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, ಅನ್ ಲಿಮಿಟೆಡ್ ರೋಮಿಂಗ್ ಕರೆ, 10 ಜಿಬಿ 3ಜಿ ಡೇಟಾ ಹಾಗೂ 3000 ಎಸ್ ಎಂ ಎಸ್ ಲಭ್ಯವಿದೆ.

ಇದಕ್ಕಿಂತ ಅಧಿಕ ಡೇಟಾ ಬಳಸಿದ್ದಲ್ಲಿ ಪ್ರತಿ ಎಂಬಿಗೆ 50 ಪೈಸೆ ಹಾಗೂ ಪ್ರತಿ ಎಸ್ ಎಂ ಎಸ್ ಗೆ 50 ಪೈಸೆ ಚಾರ್ಜ್ ಮಾಡಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...