alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಶೀಘ್ರದಲ್ಲೇ ಕಾದಿದೆ ‘ಶಾಕ್’

ಜಿಯೋ ಗ್ರಾಹಕರು, ಜಿಯೋ ಟಿವಿ ಹಾಗೂ ಸಿನಿಮಾವನ್ನು ಉಚಿತವಾಗಿ ನೋಡ್ತಿದ್ದರು. ಇನ್ಮುಂದೆ ಜಿಯೋ ಟಿವಿ ಹಾಗೂ ಸಿನಿಮಾ ನೋಡಲು ಗ್ರಾಹಕರು ಹಣ ಪಾವತಿ ಮಾಡಬೇಕು. ಶೀಘ್ರವೇ ರಿಲಯನ್ಸ್ ಜಿಯೋ ಉಚಿತ ಸೇವೆಯನ್ನು ರದ್ದು ಮಾಡ್ತಿದೆ.

ಮಾಧ್ಯಮಗಳ ವರದಿ ಪ್ರಕಾರ, ಜಿಯೋ ಉಚಿತ ಮಾದರಿಗಳನ್ನು ಪ್ರೀಮಿಯಮ್ ಮಾದರಿಗೆ ವರ್ಗಾವಣೆ ಮಾಡುವ ಆಲೋಚನೆಯಲ್ಲಿದೆ. ಈವರೆಗೆ ಕಂಪನಿ ರಿಚಾರ್ಜ್ ಪ್ಯಾಕ್ ನಲ್ಲಿಯೇ ಈ ಸೇವೆಗಳನ್ನು ಉಚಿತವಾಗಿ ನೀಡ್ತಾಯಿತ್ತು. ಆದ್ರೆ ಇನ್ಮುಂದೆ ಇದಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸುವ ಸಾಧ್ಯತೆಯಿದೆ.

ಕಂಪನಿ ಜಿಯೋ ಟಿವಿ ಹಾಗೂ ಸಿನಿಮಾಕ್ಕೆ ಎಷ್ಟು ಶುಲ್ಕ ವಿಧಿಸಲಿದೆ ಎಂಬುದನ್ನು ಇನ್ನು ಸ್ಪಷ್ಟಪಡಿಸಿಲ್ಲ. ಕಂಪನಿಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 2016 ರಲ್ಲಿ ಮಾರುಕಟ್ಟೆಗೆ ಕಾಲಿಟ್ಟ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿತ್ತು. ತನ್ನೆಲ್ಲ ಸೇವೆಗಳನ್ನು ಉಚಿತವಾಗಿ ನೀಡಿತ್ತು. ನಂತ್ರ ರಿಜಾರ್ಜ್ ಸೇವೆಗಳಿಗೆ ಶುಲ್ಕ ವಿಧಿಸಿದ್ದ ಕಂಪನಿ ಜಿಯೋ ಟಿವಿ, ಸಿನಿಮಾ ಸೇರಿದಂತೆ ಅನೇಕ ಸೇವೆಗಳನ್ನು ಉಚಿತವಾಗಿ ನೀಡ್ತಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...