alex Certify
ಕನ್ನಡ ದುನಿಯಾ       Mobile App
       

Kannada Duniya

ನಿರುದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದ ಜಿಯೋ

ಟೆಲಿಕಾಂ ವಲಯದ ಪ್ರಮುಖ ಕಂಪನಿ ರಿಲಾಯನ್ಸ್ ಜಿಯೋ ಈ ವರ್ಷ 80 ಸಾವಿರ ಜನರಿಗೆ ನೌಕರಿ ನೀಡಲಿದೆ. ಜಿಯೋದ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿ ಸಂಜಯ್ ಜೋಗ್ ಈ ವಿಷ್ಯವನ್ನು ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 70-80 ಸಾವಿರ ಉದ್ಯೋಗ ಸೃಷ್ಟಿಗೆ ಮುಂದಾಗಿರುವುದಾಗಿ ಸಂಜಯ್ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂಜಯ್ ನಂತ್ರ ವರದಿಗಾರರ ಜೊತೆ ಮಾತನಾಡಿದ್ರು. ಈಗಾಗಲೇ ರಿಲಾಯನ್ಸ್ ಜಿಯೋದಲ್ಲಿ 1,57,000 ಉದ್ಯೋಗಿಗಳಿದ್ದಾರೆಂದು ಸಂಜಯ್ ತಿಳಿಸಿದ್ರು. ಜಿಯೋ ಸುಮಾರು 6,000 ಕಾಲೇಜುಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದ್ರಲ್ಲಿ ತಾಂತ್ರಿಕ ಸಂಸ್ಥೆಗಳೂ ಸೇರಿವೆ.

ಕೆಲ ಕಾಲೇಜುಗಳಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಶಿಕ್ಷಣ ನೀಡಲಾಗ್ತಿದೆ. ಇದು ವಿದ್ಯಾರ್ಥಿಗಳು ನೇರವಾಗಿ ಕೆಲಸ ಪಡೆಯಲು ನೆರವಾಗುತ್ತದೆ. ಕಾಲೇಜಿನ ಮೂಲಕವೊಂದೇ ಅಲ್ಲ ಕಂಪನಿ ನೇರವಾಗಿಯೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ಸಂಜಯ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...