alex Certify
ಕನ್ನಡ ದುನಿಯಾ       Mobile App
       

Kannada Duniya

60 ಲಕ್ಷ ಫೋನ್ ಫ್ರೀಯಾಗಿ ನೀಡಲಿದೆ ಜಿಯೋ

ಭಾನುವಾರದಿಂದ ಜಿಯೋ ಫೋನ್ ವಿತರಣೆ ಆರಂಭವಾಗಿದ್ದು, 15 ದಿನಗಳಲ್ಲಿ 60 ಲಕ್ಷ ಫೋನ್ ಗಳನ್ನು ವಿತರಿಸಲಾಗುವುದು.

ಕಡಿಮೆ ಬೆಲೆಯ 4 ಜಿ ಹ್ಯಾಂಡ್ ಸೆಟ್ ಇದಾಗಿದ್ದು, ಮೊದಲು ಬುಕ್ಕಿಂಗ್ ಮಾಡಿದ 60 ಲಕ್ಷ ಮಂದಿಗೆ ಫೋನ್ ವಿತರಣೆಯಾಗಲಿದೆ. ಭದ್ರತೆ ದೃಷ್ಠಿಯಿಂದ ಮುಂಗಡ ಬುಕ್ಕಿಂಗ್ ಹಣ ಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ವಾಪಸ್ ಮಾಡಲಾಗುವುದು.

ಹಾಗಾಗಿ ಜಿಯೋ ಫೋನ್, ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ. 15 ದಿನದಲ್ಲಿ 60 ಲಕ್ಷ ಫೋನ್ ವಿತರಣೆಯಾಗಲಿದ್ದು, ಮೊಬೈಲ್ ಸೇವಾ ಕ್ಷೇತ್ರದಲ್ಲಿ ಸಂಚಲನ ಸೃಷ್ಠಿಸಿದೆ.

500 ರೂ. ಮುಂಗಡ ನೀಡಿ ಬುಕ್ಕಿಂಗ್ ಮಾಡಿದ್ದ ಗ್ರಾಹಕರು 1000 ರೂ.ಗಳನ್ನು ವಿತರಣೆ ಸಂದರ್ಭದಲ್ಲಿ ಕೊಡಬೇಕಿದೆ. ಈ ಹಣವನ್ನು 3 ವರ್ಷಗಳಲ್ಲಿ ವಾಪಸ್ ಮಾಡಲಾಗುವುದು.

2 ನೇ ಹಂತದಲ್ಲಿ ಬುಕ್ಕಿಂಗ್ ಮಾಡಿದ್ದ 61.8 ಲಕ್ಷ ಗ್ರಾಹಕರಿಗೆ ಜಿಯೋ ಫೋನ್ ವಿತರಿಸಲಾಗುವುದು. ವಾಯ್ಸ್ ಕಾಲ್ ಉಚಿತವಾಗಿದ್ದು, ತಿಂಗಳಿಗೆ 153 ರೂ. ಪಾವತಿಸಿದಲ್ಲಿ ಅನ್ ಲಿಮಿಟೆಡ್ ಡೇಟಾ ಫ್ರೀಯಾಗಿ ಸಿಗಲಿದೆ. ಇದರೊಂದಿಗೆ ಇನ್ನೂ ಹಲವು ಸೌಲಭ್ಯಗಳು ಉಚಿತವಾಗಿ ಸಿಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...