alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ 153 ರೂ. ಪ್ಲಾನ್ ನಲ್ಲಿ ಬದಲಾವಣೆ….

ರಿಲಯೆನ್ಸ್ ಜಿಯೋದ 153 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ಪ್ಲಾನ್ ನಲ್ಲಿ ದಿನಕ್ಕೆ 1 ಜಿಬಿ ಡೇಟಾ ಸಿಗಲಿದೆ. ಜೊತೆಗೆ ಇದು 28 ದಿನಗಳ ವ್ಯಾಲಿಡಿಟಿಯನ್ನೂ ಹೊಂದಿದೆ. ಪ್ರಿಪೇಯ್ಡ್ ಬಳಕೆದಾರರು ಈ ಕೊಡುಗೆಯ ಲಾಭ ಪಡೆಯಬಹುದು.

ಈಗ 153 ರೂಪಾಯಿ ರೀಚಾರ್ಜ್ ಮಾಡಿದ ಗ್ರಾಹಕರಿಗೆ ಪರಿಷ್ಕೃತ ಆಫರ್ ಲಭ್ಯವಾಗಲಿದೆ. ಪ್ರತಿದಿನ 1 ಜಿಬಿ ಹೈಸ್ಪೀಡ್ ಡೇಟಾವನ್ನು ಗ್ರಾಹಕರು ಬಳಸಬಹುದು. 1 ಜಿಬಿ ಖಾಲಿಯಾದ ಬಳಿಕ ಇಂಟರ್ನೆಟ್ ಸ್ಪೀಡ್ 64 kbps ಆಗಲಿದೆ. ಇದಕ್ಕೂ ಮೊದಲು 153 ರೂ. ಪ್ಲಾನ್ ನಲ್ಲಿ 500 ಎಂಬಿ ಡೇಟಾ ನೀಡಲಾಗುತ್ತಿತ್ತು.

ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯವಿದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್ ಎಂ ಎಸ್ ಗಳನ್ನೂ ಜಿಯೋ ನೀಡಿದೆ. 149 ರೂಪಾಯಿ ಪ್ಲಾನ್ ನಲ್ಲೂ ಜಿಯೋ ಇದೇ ರೀತಿಯ ಕೊಡುಗೆಗಳನ್ನು ನೀಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...