alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೊಂದಷ್ಟು ಮುಖ್ಯ ಮಾಹಿತಿ….

jio-sim-cards-preview-welcome-offer

ಗ್ರಾಹಕರಿಗೆ ಈಗ ಜಿಯೋ ಪ್ರೈಮ್ ಸಬ್ ಸ್ಕ್ರಿಪ್ಷನ್ ಪ್ಲಾನ್ ಲಭ್ಯವಿದೆ. ಮಾರ್ಚ್ 31 ರವರೆಗೂ ವಾರ್ಷಿಕ 99 ರೂಪಾಯಿ ಪಾವತಿಸಿ ನೀವು ಉಚಿತ ಸೇವೆ ಪಡೆಯಬಹುದು. ಜಿಯೋ 4ಜಿ ಉಚಿತ ಡೇಟಾ ಜೊತೆಗೆ ಹ್ಯಾಪಿ ನ್ಯೂ ಇಯರ್ ಆಫರ್ ನ ಸೇವೆ ಕೂಡ ಲಭ್ಯವಿದೆ.

ಜಿಯೋ ಪ್ರೈಮ್ ನಲ್ಲಿ 1000 ರೂಪಾಯಿ ಮೌಲ್ಯದ ಆಪ್ ಸರ್ವೀಸ್ ಕೊಡಲಾಗುತ್ತಿದೆಯಂತೆ. ಜಿಯೋ ಪ್ರಿ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರು ಜಿಯೋ ಪ್ರೈಮ್ ಸದಸ್ಯರಾಗಬಹುದು.

19 ರೂ – ಜಿಯೋ ಪ್ರೈಮ್ ಮತ್ತು ಪ್ರಿಪೇಯ್ಡ್ : ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ 19 ರೂಪಾಯಿಯ ಒಂದು ದಿನದ ರೀ ಚಾರ್ಜ್ ಪ್ಯಾಕ್ ಲಭ್ಯವಿದೆ. ಇದರಲ್ಲಿ 100 ಎಂಬಿ 4ಜಿ ಡೇಟಾ, ಉಚಿತ ಕಾಲ್ ಸೌಲಭ್ಯ ಹಾಗೂ 100 ಎಸ್ ಎಂ ಎಸ್ ದೊರೆಯಲಿದೆ. ನೀವು ಜಿಯೋ ಪ್ರೈಮ್ ಗ್ರಾಹಕರಾಗಿದ್ದಲ್ಲಿ 200 ಎಂಬಿ ಡೇಟಾ ದೊರೆಯಲಿದೆ.

49 ರೂ – ಜಿಯೋ ಪ್ರೈಮ್ ಮತ್ತು ಪ್ರಿಪೇಯ್ಡ್ : ಈ ಪ್ಲಾನ್ ಗೆ 3 ದಿನಗಳ ವ್ಯಾಲಿಡಿಟಿ ಇದೆ. 19 ರೂಪಾಯಿ ಪ್ಲಾನ್ ನ ಎಲ್ಲಾ ಸೇವೆಗಳು ದೊರೆಯಲಿದ್ದು, 300 ಎಂಬಿ ಡೇಟಾ ಸಿಗುತ್ತದೆ. ಪ್ರೈಮ್ ಗ್ರಾಹಕರು 600 ಎಂಬಿ ಡೇಟಾ ಪಡೆಯಬಹುದು.

96 ರೂ – ಜಿಯೋ ಪ್ರೈಮ್, ಪ್ರಿ ಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ : ಇದು 7 ದಿನಗಳ ವ್ಯಾಲಿಡಿಟಿಯುಳ್ಳ ಪ್ಲಾನ್. ಇದರಲ್ಲಿ ಗ್ರಾಹಕರಿಗೆ 600 ಎಂಬಿ ಡೇಟಾ ದೊರೆಯಲಿದೆ. ಪ್ರೈಮ್ ಗ್ರಾಹಕರಿಗೆ ದಿನಕ್ಕೆ 1 ಜಿಬಿಯಂತೆ 7 ಜಿಬಿ ಡೇಟಾ ಲಭ್ಯವಿದೆ.

jio-inm

149 ರೂ – 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ 1 ಜಿಬಿ 4ಜಿ ಡೇಟಾ ದೊರೆಯುತ್ತದೆ. ಜಿಯೋ ಪ್ರೈಮ್ ಗ್ರಾಹಕರಿಗೆ 2 ಜಿಬಿ ಹೈ ಸ್ಪೀಡ್ ಡೇಟಾ ಸೌಲಭ್ಯವಿದೆ.

303 ರೂ – ಜಿಯೋ ಪ್ರೈಮ್, ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ : ಈ ಪ್ಲಾನ್ ನಲ್ಲಿ 2.5 ಜಿಬಿ 4ಜಿ ಡೇಟಾ ದೊರೆಯಲಿದೆ. 28 ದಿನಗಳ ವ್ಯಾಲಿಡಿಟಿ ಇದ್ದು, ಪ್ರೈಮ್ ಗ್ರಾಹಕರು ದಿನಕ್ಕೆ 1 ಜಿಬಿಯಂತೆ 28 ಜಿಬಿ ಡೇಟಾ ಬಳಸಬಹುದು.

499 ರೂ – ಜಿಯೋ ಪ್ರೈಮ್, ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ : ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 5 ಜಿಬಿ ಡೇಟಾ ದೊರೆಯಲಿದೆ. ಪ್ರೈಮ್ ಗ್ರಾಹಕರು ದಿನಕ್ಕೆ 2 ಜಿಬಿಯಂತೆ 56 ಜಿಬಿ ಡೇಟಾ ಪಡೆಯಬಹುದು.

999 ರೂ – ಜಿಯೋ ಪ್ರೈಮ್, ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ : ಈ ಪ್ಲಾನ್ ಗೆ 60 ದಿನಗಳ ವ್ಯಾಲಿಡಿಟಿ ಇದೆ. 12.5 ಜಿಬಿ 4ಜಿ ಡೇಟಾ ಸಿಗಲಿದೆ. ಕಂಪನಿಯ ಸಬ್ ಸ್ಕ್ರಿಪ್ಷನ್ ಸೇವೆ ಪಡೆಯುವವರಿಗೆ 60 ಜಿಬಿ ಡೇಟಾ ಸಿಗಲಿದೆ.

1999 ರೂ – ಜಿಯೋ ಪ್ರೈಮ್, ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ : ಈ ಪ್ಲಾನ್ ಗೆ 90 ದಿನಗಳ ವ್ಯಾಲಿಡಿಟಿ ಇದ್ದು, 30 ಜಿಬಿ ಡೇಟಾ ದೊರೆಯಲಿದೆ. ಜಿಯೋ ಪ್ರೈಮ್ ಗ್ರಾಹಕರಾಗಿದ್ದಲ್ಲಿ 125 ಜಿಬಿ ಡೇಟಾ ಲಭ್ಯ. ಈ ಪ್ಲಾನ್ ನಲ್ಲಿ ಡೈಲಿ ಲಿಮಿಟ್ಸ್ ಇಲ್ಲ.

4999 ರೂ – ಜಿಯೋ ಪ್ರೈಮ್, ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ : 180 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ 100 ಜಿಬಿ 4ಜಿ ಡೇಟಾ ಸಿಗಲಿದೆ. ಪ್ರೈಮ್ ಗ್ರಾಹಕರು 350 ಜಿಬಿ ಡೇಟಾ ಪಡೆಯಬಹುದು.

9999 ರೂ – ಜಿಯೋ ಪ್ರೈಮ್, ಪ್ರಿಪೇಯ್ಡ್ : 30 ದಿನಗಳ ವ್ಯಾಲಿಡಿಟಿ ಈ ಪ್ಲಾನ್ ಗಿದ್ದು, 200 ಜಿಬಿ 4ಜಿ ಡೇಟಾ ದೊರೆಯಲಿದೆ. ಪ್ರೈಮ್ ಗ್ರಾಹಕರಿಗೆ 750 ಜಿಬಿ ಡೇಟಾ ಸಿಗಲಿದ್ದು, ಪ್ಲಾನ್ ವ್ಯಾಲಿಡಿಟಿ 360 ದಿನಗಳಿಗೆ ವಿಸ್ತರಣೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...