alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ ಮುಗಿತಿಲ್ಲ ಜಿಯೋ ಆಫರ್ ಗಳ ಸುರಿಮಳೆ

jio-appleರಿಲಾಯನ್ಸ್ ಜಿಯೋ ಬರೋಬ್ಬರಿ ಆಫರ್ ಗಳನ್ನೊತ್ತು ಮಾರುಕಟ್ಟೆಗೆ ಕಾಲಿಡುತ್ತಿದ್ದಂತೆಯೇ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ಇತರೆ ಟೆಲಿಕಾಂ ಕಂಪನಿಗಳು ಅನಿವಾರ್ಯವಾಗಿ ದರ ಸಮರಕ್ಕೆ ಮುಂದಾಗಿರುವ ಮಧ್ಯೆ, ರಿಲಾಯನ್ಸ್ ಜಿಯೋ ಮತ್ತೊಂದು ಭರ್ಜರಿ ಆಫರ್ ಘೋಷಿಸಿದೆ.

ಈ ಹಿಂದೆ ರಿಲಾಯನ್ಸ್ ಸಿಮ್ ಖರೀದಿಸಿದವರಿಗೆ ಮೂರು ತಿಂಗಳುಗಳ ಕಾಲ ಉಚಿತ ವಾಯ್ಸ್ ಕಾಲ್, ಮೆಸೇಜ್, ಡೇಟಾ ಕೊಡುಗೆ ನೀಡುವುದಾಗಿ ಹೇಳಿದ್ದ ರಿಲಾಯನ್ಸ್ ಜಿಯೋ, ಪ್ರತಿಸ್ಪರ್ಧಿ ಕಂಪನಿಗಳೂ ಕೂಡಾ ಅದಕ್ಕೆ ತಕ್ಕಂತೆ ಪ್ಲಾನ್ ರೂಪಿಸುತ್ತಿರುವ ಹಿನ್ನಲೆಯಲ್ಲಿ ಈಗ ಮತ್ತೊಂದು ಆಫರ್ ನೀಡಿದೆ.

ಆಪಲ್ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ರಿಲಾಯನ್ಸ್ ಜಿಯೋ, ಆಪಲ್ ಕಂಪನಿಯ ಐಫೋನ್ 7, ಐಫೋನ್ 7 ಪ್ಲಸ್, ಐಫೋನ್ 6 ಎಸ್, ಐಫೋನ್ 6 ಪ್ಲಸ್ ಹಾಗೂ ಐಫೋನ್ ಎಸ್ಇ ಖರೀದಿಸಿದವರಿಗೆ ವರ್ಷ ಪೂರ್ತಿ ವಾಯ್ಸ್ ಕಾಲ್, ಅನಿಯಮಿತ ಮೆಸೇಜ್, 20 ಜಿಬಿ 4 ಜಿ ಡೇಟಾ, 40 ಜಿಬಿ ವೈಫೈ ಡೇಟಾ ಹಾಗೂ ವರ್ಷ ಪೂರ್ತಿ ರಾತ್ರಿ 4ಜಿ ಡೇಟಾ ನೀಡುವುದಾಗಿ ಘೋಷಿಸಿದೆ.

ಇಷ್ಟೇ ಅಲ್ಲ, ಪ್ರಿಮಿಯಮ್ ಜಿಯೋ ಅಪ್ಲಿಕೇಶನ್ ಗಳು ಸಹ ಲಭ್ಯವಾಗಲಿವೆ. ಜೊತೆಗೆ 300 ಕ್ಕೂ ಅಧಿಕ ಲೈವ್ ಟಿವಿ ಚಾನೆಲ್ ಗಳು ಸಿಗಲಿವೆ. ಅಲ್ಲದೇ ಹೆಚ್.ಡಿ. ಕ್ವಾಲಿಟಿಯ ವಿಡಿಯೋ ಕಾಲ್ ಕೂಡಾ ಮಾಡಬಹುದಾಗಿದೆ. ಈ ಕೊಡುಗೆಯ ಮೌಲ್ಯ 18 ಸಾವಿರ ರೂ. ಗಳೆಂದು ಹೇಳಲಾಗಿದ್ದು, ಇದನ್ನು ಪಡೆಯಲು ನೀವು ನಿಗದಿಪಡಿಸಿದ ಮಾರಾಟಗಾರರಲ್ಲಿ ಐಫೋನ್ ಖರೀದಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...