alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷಾಚರಣೆ ಹಿನ್ನೆಲೆಯಲ್ಲಿ 16 ಜಿಬಿ ಡೇಟಾ ಹೆಚ್ಚುವರಿ ನೀಡ್ತಿದೆ ಜಿಯೋ

ರಿಲಾಯನ್ಸ್ ಜಿಯೋ 2 ವರ್ಷಗಳನ್ನು ಪೂರೈಸಿದೆ. ವರ್ಷಾಚರಣೆ ಸಂಭ್ರಮದಲ್ಲಿ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಟೆಲಿಕಾಂ ಟಾಕ್ ವರದಿ ಪ್ರಕಾರ ರಿಲಾಯನ್ಸ್ ಜಿಯೋ ಸೆಪ್ಟೆಂಬರ್ 11, 2018 ರವರೆಗೆ ಪ್ರತಿ ದಿನ 2 ಜಿಬಿ ಡೇಟಾವನ್ನು ಗ್ರಾಹಕರಿಗೆ ಹೆಚ್ಚುವರಿಯಾಗಿ ನೀಡಲಿದೆಯಂತೆ.

ಬೇರೆ ಬೇರೆ ಯೋಜನೆಗಳಿಗೆ ಬೇರೆ ಬೇರೆ ಡೇಟಾ ಲಭ್ಯವಾಗಲಿದೆ. 8 ಜಿಬಿ ಡೇಟಾವನ್ನು ಸೆಪ್ಟೆಂಬರ್ ನಲ್ಲಿ ಹಾಗೂ 8 ಜಿಬಿ ಡೇಟಾವನ್ನು ಅಕ್ಟೋಬರ್ ನಲ್ಲಿ ನೀಡಲಿದೆಯಂತೆ. ಜಿಯೋ ಎಲ್ಲ ಗ್ರಾಹಕರಿಗೂ ಈ ಡೇಟಾ ನೀಡ್ತಿದೆ ಎಂದು ಮೂಲಗಳು ಹೇಳಿವೆ. ಮೈ ಜಿಯೋ ಆ್ಯಪ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

ಜಿಯೋ ಆ್ಯಪ್ ನಲ್ಲಿ Jio Celebrations Pack ಸಿಗಲಿದೆ. ಅದ್ರಲ್ಲಿ ಯೋಜನೆ ಎಷ್ಟು ದಿನ ಸಿಂಧುತ್ವ ಹೊಂದಿರಲಿದೆ ಎನ್ನುವ ಮಾಹಿತಿ ಸಿಗಲಿದೆ. ಜಿಯೋ ಒಟ್ಟು 16 ಜಿಬಿ ಹೆಚ್ಚುವರಿಯಾಗಿ ನೀಡಲಿದೆ. ಪ್ರತಿ ದಿನ 2 ಜಿಬಿಯಂತೆ ಸೆಪ್ಟೆಂಬರ್ ನಲ್ಲಿ ನಾಲ್ಕು ದಿನ ಹಾಗೂ ಅಕ್ಟೋಬರ್ ನಲ್ಲಿ ನಾಲ್ಕು ದಿನ ಹೆಚ್ಚುವರಿ ಡೇಟಾವನ್ನು ಗ್ರಾಹಕರಿಗೆ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...