alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ‘4ಜಿ ಬೂಸ್ಟರ್ ಪ್ಯಾಕ್’

jioರಿಲಯೆನ್ಸ್ ಜಿಯೋ ‘ಹ್ಯಾಪಿ ನ್ಯೂ ಇಯರ್’ ಹೆಸರಲ್ಲಿ ತನ್ನ ವೆಲ್ಕಮ್ ಆಫರ್ ಅನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ. ಆದ್ರೆ ಡೇಟಾ ಲಿಮಿಟ್ ಕಡಿತಗೊಳಿಸಲಾಗಿದೆ.

ಮೊದಲು ದಿನಕ್ಕೆ 4 ಜಿಬಿ 4ಜಿ ಡೇಟಾ ಬಳಸುತ್ತಿದ್ದವರು ಇನ್ಮೇಲೆ ಕೇವಲ 1 ಜಿಬಿ ಡೇಟಾ ಬಳಸಬಹುದು. ಅಕಸ್ಮಾತ್ ನಿಮಗೆ ದಿನಕ್ಕೆ 1 ಜಿಬಿ ಡೇಟಾ ಸಾಲುತ್ತಿಲ್ಲ ಎಂದಾದಲ್ಲಿ ಜಿಯೋ ಬೂಸ್ಟರ್ ಪ್ಯಾಕ್ ಹಾಕಿಸಿಕೊಳ್ಳಬಹುದು.

ಮೈ ಜಿಯೋ ಆಪ್ ನಲ್ಲಿ ಬೂಸ್ಟರ್ ಪ್ಯಾಕ್ ಲಭ್ಯವಿದೆ. ಇದರಲ್ಲಿ ಹೆಚ್ಚುವರಿಯಾಗಿ 4ಜಿ ಡೇಟಾ ಸಿಗಲಿದೆ. 51 ರೂಪಾಯಿಯ ಬೂಸ್ಟರ್ ಪ್ಯಾಕ್ ನಲ್ಲಿ ದಿನಕ್ಕೆ 1 ಜಿಬಿ 4ಜಿ ಡೇಟಾ ದೊರೆಯಲಿದೆ. 301 ರೂಪಾಯಿಯ ಬೂಸ್ಟರ್ ಪ್ಯಾಕ್ ಹಾಕಿಸಿಕೊಂಡ್ರೆ 28 ದಿನಗಳವರೆಗೆ ಗ್ರಾಹಕರು 6ಜಿಬಿ 4ಜಿ ಡೇಟಾ ಬಳಸಬಹುದು.

 

ಅಂತರಾಷ್ಟ್ರೀಯ ಕರೆಗಳನ್ನು ಮಾಡುವವರಿಗಾಗಿ ಜಿಯೋ 501 ರೂಪಾಯಿಯ ಐ ಎಸ್ ಡಿ ಕೋಂಬೋ ಪ್ಯಾಕ್ ಕೊಡ್ತಾ ಇದೆ. 435 ರೂಪಾಯಿ ಬ್ಯಾಲೆನ್ಸ್ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿ ಇರಲಿದೆ. ಐ ಎಸ್ ಡಿ ಕರೆ ಮಾಡಲು ಮಾತ್ರ ಇದನ್ನು ಬಳಸಬಹುದು. ಹ್ಯಾಪಿ ನ್ಯೂ ಇಯರ್ ಆಫರ್ ಅಡಿಯಲ್ಲಿ ದಿನಕ್ಕೆ 100 ಉಚಿತ ಎಸ್ ಎಂ ಎಸ್ ಸೌಲಭ್ಯ ನೀಡಲಾಗಿದೆ. ಹೆಚ್ಚು ಎಸ್ ಎಂ ಎಸ್ ಅಗತ್ಯವಿರುವವರು 201 ರೂಪಾಯಿಯ ಕೋಂಬೋ ಪ್ಯಾಕ್ ಹಾಕಿಸಿಕೊಳ್ಳಬಹುದು. ಇದರಲ್ಲಿ ಹೆಚ್ಚುವರಿಯಾಗಿ 175 ಎಸ್ ಎಂ ಎಸ್ ದೊರೆಯಲಿದೆ. ಇದನ್ನು ಆಕ್ಟಿವೇಟ್ ಮಾಡಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.

ಮೈ ಜಿಯೋ ಆಪ್ ಓಪನ್ ಮಾಡಿ ನಿಮ್ಮ ಜಿಯೋ ಐಡಿಯೊಂದಿಗೆ ಲಾಗಿನ್ ಆಗಿ. ಫೋನ್ ನಲ್ಲಿ ಜಿಯೋ ಸಿಮ್ ಇದೆ ಅನ್ನೋದನ್ನು ಖಚಿತಪಡಿಸಿಕೊಳ್ಳಿ.

ಮೈ ಜಿಯೋ ಟ್ಯಾಬ್ ಸೆಲೆಕ್ಟ್ ಮಾಡಿ.

ರಿಚಾರ್ಜ್ ಆಪ್ಷನ್ ತೆರೆಯಿರಿ.

ಬ್ರೌಸ್ ಪ್ಲಾನ್ ಗಳಲ್ಲಿ ಬೂಸ್ಟರ್ ಟ್ಯಾಬ್ ಹಾಗೂ ಕೋಂಬೋ ಟ್ಯಾಬ್ ಹುಡುಕಿ.

ನಿಮಗೆ ಬೇಕಾದ ಪ್ಲಾನ್ ಸೆಲೆಕ್ಟ್ ಮಾಡಿ.

ಜಿಯೋ ಮನಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪೇಮೆಂಟ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...