alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದವರೆಗೆ ಡೇಟಾ, ಕರೆ ಉಚಿತ: ಶೇ.100ರಷ್ಟು ಕ್ಯಾಶ್ಬ್ಯಾಕ್

ಟೆಲಿಕಾಂ ಉದ್ಯಮದಲ್ಲಿ ಬೆಲೆ ಸಮರ ಮುಗಿಯುವ ಲಕ್ಷಣ ಕಾಣ್ತಿಲ್ಲ. ಎರಡು ವರ್ಷಗಳ ಹಿಂದೆ ಟೆಲಿಕಾಂ ಕ್ಷೇತ್ರಕ್ಕೆ ರಿಲಾಯನ್ಸ್ ಜಿಯೋ ಪಾದಾರ್ಪಣೆ ಮಾಡ್ತಿದ್ದಂತೆ ಈ ಸಮರ ಶುರುವಾಗಿದೆ. ಟೆಲಿಕಾಂ ಕಂಪನಿಗಳ ಬೆಲೆ ಯುದ್ಧದ ಲಾಭ ಗ್ರಾಹಕರಿಗಾಗ್ತಿದೆ. ದಿನಕ್ಕೊಂದು ಹೊಸ ಪ್ಲಾನ್ ಜಾರಿಗೆ ತರ್ತಿರುವ ಕಂಪನಿಗಳು ಗ್ರಾಹಕರನ್ನು ಸೆಳೆಯುವ ಯತ್ನ ಮಾಡ್ತಿವೆ.

ರಿಲಾಯನ್ಸ್ ಜಿಯೋ ದೀಪಾವಳಿ ಸಂದರ್ಭದಲ್ಲಿ ದೀಪಾವಳಿ ಧಮಾಕಾ ಹೆಸರಿನ ಯೋಜನೆಯನ್ನು ಶುರು ಮಾಡಿತ್ತು. ಈ ಯೋಜನೆಯ ಲಾಭವನ್ನು ಈಗ್ಲೂ ಗ್ರಾಹಕರು ಪಡೆಯಬಹುದಾಗಿದೆ. ದೀಪಾವಳಿ ಮುಗಿದ್ರೂ ಗ್ರಾಹಕರಿಗೆ ಈ ಪ್ಲಾನ್ ಮುಂದುವರೆಸಿದೆ ಕಂಪನಿ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಶೇಕಡಾ 100 ರಷ್ಟು ಕ್ಯಾಶ್ಬ್ಯಾಕ್ ಸಿಗ್ತಿದೆ.

ಒಂದು ವರ್ಷಕ್ಕೆ ಈ ಪ್ಲಾನ್ ರಿಚಾರ್ಜ್ ಮಾಡಿದ್ರೆ ನಿಮಗೆ ಶೇಕಡಾ 100 ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಜಿಯೋ ಈ ಪ್ಲಾನ್ ಬೆಲೆ 1699 ರೂಪಾಯಿ. ಪ್ಲಾನ್ ಒಂದು ವರ್ಷಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಉಚಿತ ಕರೆ ಜೊತೆ ಡೇಟಾ ಸಿಗಲಿದೆ. ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.50 ಜಿಬಿ ಡೇಟಾ ಸಿಗಲಿದೆ. ಇಡೀ ಒಂದು ವರ್ಷಕ್ಕೆ ಗ್ರಾಹಕರಿಗೆ 547.5 ಜಿಬಿ ಡೇಟಾ ಲಭ್ಯವಾಗಲಿದೆ.

ಗ್ರಾಹಕರಿಗೆ ರಿಲಾಯನ್ಸ್ ಡಿಜಿಟಲ್ ಕೂಪನ್ ರೀತಿಯಲ್ಲಿ ಕ್ಯಾಶ್ಬ್ಯಾಕ್ ಸಿಗಲಿದೆ. ಮೈ ಜಿಯೋ ಆ್ಯಪ್ ಮೂಲಕ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಕ್ಯಾಶ್ಬ್ಯಾಕ್ ರೂಪದಲ್ಲಿ ಸಿಕ್ಕ ಹಣ ಕೇವಲ ಡಿಸೆಂಬರ್ 31, 2018 ರವರೆಗೆ ಮಾತ್ರ ಸಿಂಧುತ್ವ ಹೊಂದಿರಲಿದೆ. ರಿಲಾಯನ್ಸ್ ಡಿಜಿಟಲ್ ಸ್ಟೋರ್ ನಲ್ಲಿ ಕೂಡ ಇದನ್ನು ಬಳಸಬಹುದು. ಆದ್ರೆ 5 ಸಾವಿರಕ್ಕಿಂತ ಹೆಚ್ಚು ಖರೀದಿ ಮಾಡಿದ್ದರೆ ಮಾತ್ರ ಕೂಪನ್ ಮಾನ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...