alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಾ ಕಡೆ ಜಿಯೋ ಫ್ರೀ ಸಿಮ್ ಖಾಲಿ….

JIO FREE SIMಪ್ರತಿ ದಿನ ದೇಶದ ಒಂದು ಮಿಲಿಯನ್ ಮಂದಿ ಆರಾಮಾಗಿ ರಿಲಯೆನ್ಸ್ ಜಿಯೋ ಫ್ರೀ ಸಿಮ್ ಕಾರ್ಡ್ ಪಡೆಯಬಹುದು ಅಂತಾ ಮುಖೇಶ್ ಅಂಬಾನಿ ಅಭಯ ನೀಡಿದ್ರು. ಆದ್ರೆ ವಾಸ್ತವವೇ ಬೇರೆ, 15 ದಿನ ಕಾದ್ರೂ ಜಿಯೋ ಸಿಮ್ ಸಿಗ್ತಾ ಇಲ್ಲ ಎನ್ನುತ್ತಿದ್ದಾರೆ ಬಳಕೆದಾರರು.

ಭಾರತದ ಬಹುತೇಕ ಕಡೆಗಳಲ್ಲಿ ಸಿಮ್ ಖಾಲಿ ಆಗ್ಹೋಗಿದ್ಯಂತೆ. ಈಗಾಗ್ಲೇ ಸಿಮ್ ಕಾರ್ಡ್ ಪಡೆದವರಿಗೆ ಇನ್ನೂ ಆ್ಯಕ್ಟಿವೇಶನ್ ಆಗಿಲ್ಲ. ಕಂಪನಿಯಿಂದ ಸಿಮ್ ಕಾರ್ಡ್ ವಿತರಿಸುತ್ತಿಲ್ಲ ಅನ್ನೋದು ಡಿಸ್ಟ್ರಿಬ್ಯೂಟರ್ ಗಳ ದೂರು. ಮಹಾರಾಷ್ಟ್ರದಲ್ಲಂತೂ ಈಗಾಗ್ಲೇ 50,000 ಸಿಮ್ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಮಳಿಗೆಗಳಲ್ಲೆಲ್ಲ ಸಿಮ್ ಖಾಲಿಯಾಗಿದೆ. ದೆಹಲಿಯಲ್ಲಂತೂ ಕೆಲವು ಕಡೆ ಸಿಮ್ ಪಡೆಯಲು ಗ್ರಾಹಕರು ಕ್ಯೂ ನಿಂತಿದ್ದಾರೆ. ಇನ್ನು ಕೆಲವೆಡೆ ಸಿಮ್ ಕಾರ್ಡ್ ಖಾಲಿಯಾಗಿದೆ ಅನ್ನೋ ಕಾರಣಕ್ಕೆ ಅಂಗಡಿಗಳನ್ನೇ ಬಂದ್ ಮಾಡಲಾಗಿದೆ.

ಬ್ಲ್ಯಾಕ್ ನಲ್ಲಿ 300 ರೂಪಾಯಿ ಕೊಟ್ರೂ ಜಿಯೋ ಸಿಮ್ ಸಿಗ್ತಾ ಇಲ್ಲ ಅನ್ನೋದು ಗ್ರಾಹಕರ ಅಳಲು. ಕರ್ನಾಟಕದ ಕೆಲವೆಡೆಯಲ್ಲೂ ಜಿಯೋ ಸಿಮ್ ಅನ್ನು 200-1000 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ. ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಜಿಯೋ ಸಿಮ್ ಸಿಗದೆ ಗ್ರಾಹಕರು ಪರದಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...