alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ನಂತ್ರ ಲ್ಯಾಪ್ಟಾಪ್ ಮಾರುಕಟ್ಟೆಗೆ ತರುವ ಪ್ಲಾನ್ ಮಾಡ್ತಿದೆ ಜಿಯೋ

ಮೊದಲು ಸಿಮ್ ಮಾರುಕಟ್ಟೆಗೆ ತಂದು ಟೆಲಿಕಾಂ ಕ್ಷೇತ್ರವನ್ನು ನಡುಗಿಸಿದ್ದ ಜಿಯೋ ನಂತ್ರ ಫೋನ್ ಮಾರುಕಟ್ಟೆಗೆ ತಂದಿತ್ತು. ಈಗ ರಿಲಾಯನ್ಸ್ ಜಿಯೋ ಮತ್ತೊಂದು ಕ್ಷೇತ್ರಕ್ಕೆ ಕಾಲಿಡಲು ಮುಂದಾಗಿದೆ. ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಜಿಯೋ ಶೀಘ್ರವೇ ಲ್ಯಾಪ್ ಟಾಪ್ ಮಾರುಕಟ್ಟೆಗೆ ತರ್ತಿದೆ.

ರಿಲಾಯನ್ಸ್ ಜಿಯೋ ಸೆಲ್ಯುಲರ್ ಸಂಪರ್ಕದೊಂದಿಗೆ ಲ್ಯಾಪ್ಟಾಪ್ ತರುವ ತಯಾರಿಯಲ್ಲಿದೆ. ರಿಲಾಯನ್ಸ್ ಜಿಯೋ ಸಿಮ್ ಮಾದರಿಯ ಲ್ಯಾಪ್ಟಾಪ್ ಜಾರಿಗೆ ತರಲು ಅಮೆರಿಕನ್ ಪ್ರೊಸೆಸರ್ ಕಂಪನಿ  ಕ್ವೊಲ್ಕೊಮ್ ಜೊತೆ ಮಾತುಕತೆ ನಡೆಸಿದೆ. ಇದು ವಿಂಡೋಸ್ 10 ಆಗಿರಲಿದ್ದು ಗ್ರಾಹಕರು ಇದ್ರಲ್ಲಿ ಜಿಯೋ ಸಿಮ್ ಬಳಸಬಹುದಾಗಿದೆ.

ರಿಲಾಯನ್ಸ್ ಜಿಯೋ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.  ಕ್ವೊಲ್ಕೊಮ್ ಅಧಿಕಾರಿಯೊಬ್ಬರು ರಿಲಾಯನ್ಸ್ ಜಿಯೋ ಮಾತುಕತೆ ನಡೆಸಿದೆ ಎಂದಿದ್ದಾರೆ. ಮೂಲಗಳ ಪ್ರಕಾರ ರಿಲಾಯನ್ಸ್ ಜಿಯೋ ಮುಂದಿನ ದೊಡ್ಡ ಗುರಿ ಲ್ಯಾಪ್ಟಾಪ್ ಆಗಿರಲಿದೆ. ಇದು ಕಂಪನಿ ಆದಾಯ ಹೆಚ್ಚಿಸಲು ನೆರವಾಗಲಿದೆ. ಒಂದು ವೇಳೆ ಜಿಯೋ ಲ್ಯಾಪ್ಟಾಪ್ ಮಾರುಕಟ್ಟೆಗೆ ತಂದ್ರೆ ಜಿಯೋ ಸಿಮ್ ನಲ್ಲಿ ಕೂಡ ಹೊಸ ಪ್ಲಾನ್ ಶುರು ಮಾಡಲಿದೆ. ಮೊಬೈಲ್ ಗಿಂತ ಲ್ಯಾಪ್ಟಾಪ್ ಗೆ ಹೆಚ್ಚು ಡೇಟಾ ಬೇಕಾಗೋದ್ರಿಂದ ಗ್ರಾಹಕರಿಗೆ ನೆರವಾಗುವಂತಹ ಯೋಜನೆಯನ್ನು ಜಿಯೋ ಶುರು ಮಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...