alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 2 ರೂ.ಗೆ ಹೆಚ್ ಡಿ ಚಾನೆಲ್ ನೀಡಲಿದೆ ಈ ಕಂಪನಿ

ಮೊಬೈಲ್ ಕ್ಷೇತ್ರಕ್ಕೆ ಬಾಂಬ್ ಹಾಕಿದ್ದ ರಿಲಾಯನ್ಸ್ ಜಿಯೋ ಈಗ ಟಿವಿ ಕ್ಷೇತ್ರದಲ್ಲಿ ಪಟಾಕಿ ಸಿಡಿಸಲು ಯೋಜನೆ ರೂಪಿಸುತ್ತಿದೆ. ಶೀಘ್ರದಲ್ಲಿಯೇ ಜಿಯೋ DTH ಸೆಟ್ ಅಪ್ ಬಾಕ್ಸ್ ಹಾಗೂ ಇಂಟರ್ನೆಟ್ ಆಧಾರಿತ IPTV ಬಿಡುಗಡೆ ಮಾಡುವ ತಯಾರಿಯಲ್ಲಿದೆ.

ಜಿಯೋ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ, ಜಿಯೋ ಹೋಂ ಟಿವಿ ಕೆಲಸ ಭರದಿಂದ ಸಾಗಿದೆ. ಟೆಲಿಕಾಂ ಟಾಕ್ ವರದಿ ಪ್ರಕಾರ, ಜಿಯೋ ಹೋಂ ಟಿವಿ 200 ಎಸ್ಡಿ ಹಾಗೂ ಹೆಚ್ಡಿ ಚಾನೆಲ್ ಗಳನ್ನು ತಿಂಗಳಿಗೆ 400 ರೂಪಾಯಿಗೆ ನೀಡಲಿದೆಯಂತೆ. ಅಂದ್ರೆ 2 ರೂಪಾಯಿಗೆ ಕಂಪನಿ ಹೆಚ್ಡಿ ಚಾನೆಲ್ ಗಳನ್ನು ವೀಕ್ಷಕರಿಗೆ ನೀಡಲಿದೆ. ಮೈ ಜಿಯೋ ಆ್ಯಪ್ ನಲ್ಲಿ ಈಗಾಗಲೇ ಈ ಪ್ಲಾನ್ ನೋಡಬಹುದಾಗಿದೆ.

ಡಿಟಿಹೆಚ್ ಸೆಟ್ ಅಪ್ ಬಾಕ್ಸ್ ರೂಪದಲ್ಲಿ ಜಿಯೋ ಸೇವೆ ನೀಡಲಿದೆಯೇ ಅಥವಾ ಬೇರೆ ಯಾವುದಾದ್ರೂ ಹೊಸ ವಿಧಾನ ಬಳಸಲಿದೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ. ಜಿಯೋ ಟಿವಿ ಬಗ್ಗೆ ಅನೇಕ ದಿನಗಳಿಂದ ಚರ್ಚೆಯಾಗ್ತಿದೆ. ಜಿಯೋ ನೆಟ್ ಮೂಲಕ ಟಿವಿ ಸೇವೆ ನೀಡಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಕೆಲ ದಿನಗಳ ಹಿಂದೆ ಜಿಯೋ ಸೆಟ್ ಅಪ್ ಬಾಕ್ಸ್ ಫೋಟೋ ವೈರಲ್ ಆಗಿತ್ತು.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...