alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಬಾಂಬ್ ಸಿಡಿಸಲಿದ್ದಾರೆ ಮುಖೇಶ್ ಅಂಬಾನಿ

jio-laptop

ಮಾರುಕಟ್ಟೆಯಲ್ಲಿ ಮತ್ತೊಂದು ಬಾಂಬ್ ಸಿಡಿಸಲು ಮುಖೇಶ್ ಅಂಬಾನಿ ಸಿದ್ಧವಾಗ್ತಿದ್ದಾರೆ. ಜಿಯೋ ಸಿಮ್, ಉಚಿತ ಡೇಟಾ, ಕಡಿಮೆ ಬೆಲೆಯ ಹ್ಯಾಂಡ್ ಸೆಟ್ ನಂತ್ರ ಲ್ಯಾಪ್ ಟಾಪ್ ಮೇಲೆ ಮುಖೇಶ್ ಕಣ್ಣಿಟ್ಟಿದ್ದಾರೆ.

ಮೂಲಗಳ ಪ್ರಕಾರ, ಜಿಯೋ ಶೀಘ್ರದಲ್ಲಿಯೇ 4ಜಿ ಲ್ಯಾಪ್ ಟಾಪ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಲ್ಯಾಪ್ ಟಾಪ್ ನಲ್ಲಿ ಸಿಮ್ ಸ್ಲಾಟ್ ಕೂಡ ಇರಲಿದೆ. ಸಿಮ್ ಸ್ಲಾಟ್ ನಲ್ಲಿ 4ಜಿ ಸಿಮ್ ಹಾಕಿ ನೀವು ನೆಟ್ ಬಳಸಬಹುದಾಗಿದೆ. ಜಿಯೋ ಲ್ಯಾಪ್ ಟಾಪ್ ನ್ನು Foxconn ತಯಾರಿಸಲಿದೆ ಎನ್ನಲಾಗ್ತಾ ಇದೆ. ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಮೂಲಕ ಇದು ಕೆಲಸ ಮಾಡಲಿದೆ.

ಇದ್ರ ತೂಕ 1.2 ಕೆ.ಜಿ ಇರಲಿದೆ ಎಂದು ಅಂದಾಜಿಸಲಾಗಿದೆ. 4ಜಿ ರ್ಯಾಮ್ ಕೂಡ ಇರಲಿದೆ ಎಂದು ಮೂಲಗಳು ಹೇಳ್ತಾ ಇವೆ. ಬೆಲೆ ಎಷ್ಟು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅತಿ ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ಮಾರುಕಟ್ಟೆ ಪ್ರವೇಶ ಮಾಡಲಿದೆ ಎಂದಷ್ಟೇ ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...