alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ಇ ಕ್ಷೇತ್ರಕ್ಕೂ ಲಗ್ಗೆ ಹಾಕಲಿದೆ ರಿಲಯನ್ಸ್ ಜಿಯೋ

ಭಾರತದ ಮೊಬೈಲ್ ಅಂತಾರ್ಜಾಲ ಬಳಕೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಯನ್ಸ್ ಜಿಯೋ ಇದೀಗ ಇ-ಸ್ಪೋರ್ಟ್ (ವೃತ್ತಿಪರ ವೀಡಿಯೋ ಗೇಮಿಂಗ್) ನತ್ತ ಚಿತ್ತ ನೆಟ್ಟಿದೆ.

2016ರಲ್ಲಿ ಕಡಿಮೆ ದರಕ್ಕೆ ಅಂತರ್ಜಾಲ ಒದಗಿಸುವ ಮೂಲಕ ಮೊಬೈಲ್ ನೆಟ್ ವರ್ಕ್ ಕಂಪನಿಗಳ ನಿದ್ದೆಗೆಡಿಸಿದ್ದ ಜಿಯೋ ಬಳಿಕ ಬ್ರಾಡ್ ಬಾಂಡ್ ಮಾರ್ಕೆಟಿಗೂ ಲಗ್ಗೆ ಇಡಲು ತಯಾರಾಗಿದೆ. ಇದಾದ ಬಳಿಕ ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋ ಬಳಗ ಭಾರತದಲ್ಲಿ ಇ-ಸ್ಪೋರ್ಟ್ಸ್ ಜಾಲವನ್ನು ಆಳಲು ಚಿಂತನೆ ನಡೆಸಿದೆ.

ಈಗಾಗಲೇ ಇ ಗೇಮ್ಸ್ ನ ದೈತ್ಯ ಸಂಸ್ಥೆಯಾದ ರಾಯಟ್ ಗೇಮ್ಸ್ ನ ಮಾಜಿ ಮುಖ್ಯಸ್ಥ ಅನುರಾಗ್ ಖನ್ನಾ ಅವರನ್ನೇ ಜಿಯೋ ತನ್ನ ಇ-ಸ್ಪೋರ್ಟ್ಸ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡಿದೆ. ಈ ಬಗ್ಗೇ ಜಿಯೋ ಸಂಸ್ಥೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಖುದ್ದು ಖನ್ನಾ ಅವರೇ ತನ್ನ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ರಿಲಯನ್ಸ್ ಜಿಯೋ ಇನ್ಫೋ ಕಮ್ಯುನಿಕೇಶನ್ ಲಿ. ನ ಇ ಸ್ಪೋರ್ಟ್ಸ್ ಹೆಡ್ ಎಂದು ಬದಲಾಯಿಸಿಕೊಂಡಾಗಲೇ ವಿಷಯ ಬೆಳಕಿಗೆ ಬಂದಿದ್ದು. ಆದರೆ ರಿಲಯನ್ಸ್ ಜಿಯೋ ಕೂಡ ಈ ಬೆಳವಣಿಗೆಯನ್ನು ಅಲ್ಲಗೆಳೆದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...