alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗ್ರಾಹಕರಿಗೆ ಈ ಪ್ಲಾನ್ ನಲ್ಲಿ ಸಿಗ್ತಿದೆ ಪ್ರತಿ ದಿನ 4.5 ಜಿಬಿ ಡೇಟಾ…!

ರಿಲಾಯನ್ಸ್ ಜಿಯೋ ಇತ್ತೀಚಿಗಷ್ಟೇ ತನ್ನ ಯೋಜನೆಯಲ್ಲಿ ಭಾರೀ ಬದಲಾವಣೆ ಮಾಡಿದೆ. ಸೀಮಿತ ಅವಧಿಗೆ ತನ್ನೆಲ್ಲ ಪ್ಲಾನ್ ಡೇಟಾವನ್ನು ಹೆಚ್ಚು ಮಾಡಿ ಡಬಲ್ ಧಮಾಕಾ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ಪ್ರಕಾರ ಪ್ರತಿ ಪ್ಲಾನ್ ಪಡೆದ ಗ್ರಾಹಕರಿಗೂ 1.5 ಜಿಬಿ ಡೇಟಾ ಹೆಚ್ಚುವರಿಯಾಗಿ ಸಿಗ್ತಿದೆ.

ಯೋಜನೆಯಡಿ 149 ರೂಪಾಯಿ ಹಾಗೂ 399 ರೂಪಾಯಿ ಪ್ಲಾನ್ ಪಡೆದ ಗ್ರಾಹಕರಿಗೆ 3 ಜಿಬಿ ಡೇಟಾ ಈಗ ಗ್ರಾಹಕರಿಗೆ ಸಿಗ್ತಿದೆ. 299 ರೂಪಾಯಿ ಪ್ಲಾನ್ ಸದ್ಯ ವಿಶೇಷತೆ ಹೊಂದಿದೆ. ಯಾಕೆಂದ್ರೆ 299 ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರು 4.5 ಜಿಬಿ ಡೇಟಾ ಪಡೆಯಲಿದ್ದಾರೆ.

ರಿಲಾಯನ್ಸ್ ಜಿಯೋ 299 ರೂಪಾಯಿ ಪ್ಲಾನ್ ನಲ್ಲಿ ಅನಿಯಮಿತ ಕರೆ, ಪ್ರತಿ ದಿನ 100 ಎಸ್ ಎಂ ಎಸ್ ಜೊತೆ 4.5 ಜಿಬಿ ಡೇಟಾ ನೀಡ್ತಿದೆ. ಇಷ್ಟೇ ಅಲ್ಲ ಜಿಯೋ ಟಿವಿ ಸೌಲಭ್ಯ ಕೂಡ ಗ್ರಾಹಕರಿಗೆ ಸಿಗ್ತಿದೆ. ಗ್ರಾಹಕರು ಫಿಫಾ ವಿಶ್ವಕಪ್ ಪಂದ್ಯವನ್ನು ಲೈವ್ ವೀಕ್ಷಣೆ ಮಾಡಬಹುದಾಗಿದೆ.

ಜಿಯೋದ 299 ರೂಪಾಯಿ ಪ್ಲಾನ್ ನಲ್ಲಿ ಮೊದಲು 3 ಜಿಬಿ ಡೇಟಾ ಪ್ರತಿದಿನ ನೀಡಲಾಗ್ತಾಯಿತ್ತು. ಡಬಲ್ ದಮಾಕಾ ಆಫರ್ ಹಿನ್ನೆಲೆಯಲ್ಲಿ 1.5 ಜಿಬಿ ಡೇಟಾ ಹೆಚ್ಚುವರಿಯಾಗಿ ಸಿಗ್ತಿದೆ. ಹಾಗಾಗಿ ಗ್ರಾಹಕರಿಗೆ ಪ್ರತಿ ದಿನ 4.5 ಜಿಬಿ ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...