alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿಧ ಕಂಪನಿಗಳ ಡೇಟಾ ಪ್ಯಾಕ್ ದರ ಇಲ್ಲಿದೆ ನೋಡಿ

Here are best data deals from Airtel, Vodafone, BSNL and Ideaರಿಲಾಯನ್ಸ್ ಜಿಯೋ ಆರಂಭಿಕ ಕೊಡುಗೆಯಾಗಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದಂತೆಯೇ ಇತರೆ ಮೊಬೈಲ್ ಕಂಪನಿಗಳೂ ಈ ಸ್ಪರ್ಧೆಯನ್ನೆದುರಿಸಲು ಶೇ.80 ರಷ್ಟು ಡೇಟಾ ಪ್ಯಾಕ್ ಗಳ ಮೇಲಿನ ದರವನ್ನು ಕಡಿತಗೊಳಿಸಿವೆ.

ರಿಲಾಯನ್ಸ್ 90 ದಿನಗಳವರೆಗೆ ಉಚಿತ 4ಜಿ ಎಲ್.ಟಿ.ಇ ಡೇಟಾ, ಅನಿಯಮಿತ ಕರೆಗಳ ಜೊತೆಗೆ ವಿಡಿಯೋ ಕಾಲಿಂಗ್ ಸೌಲಭ್ಯವನ್ನೂ ನೀಡುತ್ತಿದ್ದು, ರಿಲಾಯನ್ಸ್ ಸಿಮ್ ಖರೀದಿಗೆ ಈಗ ಜನ ಮುಗಿ ಬಿದ್ದಿದ್ದಾರೆ. ಹೀಗಾಗಿ ಕೆಲ ಪ್ರಮುಖ ಟೆಲಿಕಾಂ ಕಂಪನಿಗಳು ಡೇಟಾ ಪ್ಯಾಕ್ ದರವನ್ನು ಕಡಿತಗೊಳಿಸಿದ್ದು, ಅದರ ವಿವರ ಇಲ್ಲಿದೆ ನೋಡಿ.

ದೇಶದ ಟೆಲಿಕಾಂ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಏರ್ ಟೆಲ್, ಡೇಟಾ ಪ್ಯಾಕ್ ದರವನ್ನು ಶೇ. 80 ರಷ್ಟು ಕಡಿತಗೊಳಿಸಿದ್ದು, ಆದರೆ ಈ ಸೌಲಭ್ಯ ಪಡೆಯಬೇಕೆಂದರೆ 1,498 ರೂ. ರೀ ಚಾರ್ಜ್ ಮಾಡಿಸಬೇಕಾಗುತ್ತದೆ. ಆ ಬಳಿಕ ಕೇವಲ 51 ರೂಪಾಯಿಗಳಲ್ಲಿ 12 ತಿಂಗಳ ಕಾಲ 1 ಜಿಬಿ 3ಜಿ/4ಜಿ ಡೇಟಾ ದೊರೆಯಲಿದ್ದು, ಈ 12 ತಿಂಗಳ ಅವಧಿಯಲ್ಲಿ ಎಷ್ಟು ಬಾರಿ ಬೇಕಾದರೂ 51 ರೂ. ಪಾವತಿಸಿ 1 ಜಿಬಿ ಡೇಟಾ ಪಡೆಯಬಹುದಾಗಿದೆ. ಏರ್ ಟೆಲ್ ನ ಇತರೆ ಡೇಟಾ ಪ್ಯಾಕ್ ಗಳ ದರ ಈ ರೀತಿ ಇದೆ.

ಏರ್ ಟೆಲ್  (ಈ ಮೊತ್ತಕ್ಕೆ ಹಿಂದೆ ನೀಡುತ್ತಿದ್ದ ಜಿಬಿ ಯ ವಿವರ ಬ್ರಾಕೆಟ್ ನಲ್ಲಿದೆ)

580MB (440MB) – Rs 145

3GB (2GB) – Rs 455 for 28 days

5GB (3GB) – Rs 655 for 28 days

6GB (4GB) – Rs 755 for 28 days

7GB (5GB) – Rs 855 for 28 days

10GB (6.5GB) -Rs 989 for 28 days

ವೋಡಾಫೋನ್ (ಈ ಮೊತ್ತಕ್ಕೆ ಹಿಂದೆ ನೀಡುತ್ತಿದ್ದ ಜಿಬಿ ಯ ವಿವರ ಬ್ರಾಕೆಟ್ ನಲ್ಲಿದೆ)

5GB (3GB) – Rs 650 for 28 days

3GB (2GB) – Rs 449 for 28 days

10GB (6GB)- Rs 999 for 28 days

50MB (30MB)-Rs 12 for 1 day

ಐಡಿಯಾ (ಈ ಹಿಂದಿನ ದರ ಬ್ರಾಕೆಟ್ ನಲ್ಲಿದೆ)

2GB – Rs 349 for 28 days (Rs 449)

5GB – Rs 649 for 28 days (Rs 849)

10GB-Rs 990 for 28 days (Rs 1349)

ಬಿಎಸ್ಎನ್ಎಲ್ (ಈ ಮೊತ್ತಕ್ಕೆ ಹಿಂದೆ ನೀಡುತ್ತಿದ್ದ ಜಿಬಿ ಯ ವಿವರ ಬ್ರಾಕೆಟ್ ನಲ್ಲಿದೆ)

1,099 ರೂಪಾಯಿಗೆ ಅನಿಯಮಿತ 3 ಜಿ ಸೌಲಭ್ಯ

10GB (5GB) – Rs 549

2GB (1GB) – Rs 156 for 10 days

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...