alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಪೇಯ್ಡ್ ಗ್ರಾಹಕರಿಗೆ ಏರ್ಟೆಲ್ ಹೊಸ ಆಫರ್

ರಿಲಯೆನ್ಸ್ ಜಿಯೋ ಕಂಪನಿಯ ವಿಶಿಷ್ಟ ಕೊಡುಗೆಗಳಿಗೆ ಟಕ್ಕರ್ ಕೊಡಲು ಏರ್ಟೆಲ್ ಕೂಡ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್ 5 ರೂ. ನಿಂದ ಆರಂಭವಾಗಿ 399 ರೂ. ವರೆಗೂ ಇದೆ.

5 ರೂಪಾಯಿ ಪ್ಲಾನ್ ನಲ್ಲಿ 7 ದಿನಗಳಿಗೆ 4ಜಿಬಿ 4ಜಿ/3ಜಿ ಡೇಟಾ ದೊರೆಯಲಿದೆ. 4ಜಿ ಸಿಮ್ ಅಪ್ ಗ್ರೇಡ್ ಹೊಂದಿರುವವರಿಗೆ ಮಾತ್ರ ಈ ಆಫರ್ ಲಭ್ಯ.

8 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ ಗ್ರಾಹಕರು 56 ದಿನಗಳವರೆಗೆ 30 ಪೈಸೆ ಪ್ರತಿ ನಿಮಿಷದಂತೆ ಲೋಕಲ್ ಮತ್ತು ಎಸ್ ಟಿ ಡಿ ಕರೆ ಮಾಡಬಹುದು.

40 ರೂ. ಪ್ಲಾನ್ ನಲ್ಲಿ ಗ್ರಾಹಕರಿಗೆ 35 ರೂಪಾಯಿ ಟಾಕ್ ಟೈಮ್ ದೊರೆಯುತ್ತದೆ. ಅನ್ ಲಿಮಿಟೆಡ್ ವ್ಯಾಲಿಡಿಟಿ ಇದೆ.

60 ರೂಪಾಯಿ ರೀಚಾರ್ಜ್ ಮಾಡಿದ್ರೆ ಅನ್ ಲಿಮಿಡೆಟ್ ವ್ಯಾಲಿಡಿಟಿ ಹಾಗೂ 58 ರೂ. ಟಾಕ್ ಟೈಮ್ ದೊರೆಯುತ್ತದೆ.

149 ರೂಪಾಯಿ ರೀಚಾರ್ಜ್ ಮಾಡಿದ್ರೆ ಏರ್ಟೆಲ್ ನಿಂದ ಏರ್ಟೆಲ್ ಗೆ ಅನಿಯಮಿತ ಉಚಿತ ಕರೆ ಮಾಡಬಹುದು. 28 ದಿನಗಳ ವ್ಯಾಲಿಡಿಟಿ ಇರುತ್ತದೆ. 2 ಜಿಬಿ 4ಜಿ ಡೇಟಾ ದೊರೆಯುತ್ತದೆ.

199 ರೂ. ಪ್ಲಾನ್ ನಲ್ಲಿ 28 ದಿನಗಳವರೆಗೆ ಪ್ರತಿದಿನ 1 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳನ್ನು ಮಾಡಬಹುದು. ಜೊತೆಗೆ 1 ಜಿಬಿ ಡೇಟಾ ಕೂಡ ದೊರೆಯುತ್ತದೆ.

349 ರೂಪಾಯಿ ರೀಚಾರ್ಜ್ ಮಾಡಿದ್ರೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಜೊತೆಗೆ ಶೇ.10ರಷ್ಟು ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಇದರಲ್ಲಿ ಇನ್ನೂ ಒಂದು ಪ್ಲಾನ್ ಇದೆ. ಅದರಲ್ಲಿ ಅನಿಯಮಿತ ಕರೆ ಹಾಗೂ 28 ಜಿಬಿ ಡೇಟಾ ದೊರೆಯುತ್ತದೆ.

399 ರೂಪಾಯಿಯ ಹೊಸ ಪ್ಲಾನ್ ಅನ್ನು ಏರ್ಟೆಲ್ ಬಿಡುಗಡೆ ಮಾಡಿದೆ. ಪ್ರತಿದಿನ 1 ಜಿಬಿ 4ಜಿ ಡೇಟಾ, ಅನಿಯಮಿತ ಕರೆ ಇದರಲ್ಲಿ ದೊರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...