alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆಫರ್ ನಲ್ಲಿ ಸಿಗ್ತಿದೆ 300 ಜಿಬಿ ಉಚಿತ ಡೇಟಾ

ರಿಲಾಯನ್ಸ್ ಜಿಯೋ ಗಿಗಾ ಫೈಬರ್ ಘೋಷಣೆ ನಂತ್ರ ಸುದ್ದಿಯಲ್ಲಿದೆ. ಆಗಸ್ಟ್ 15ರಿಂದ ಜಿಯೋ ಗಿಗಾಫೈಬರ್ ಬುಕ್ಕಿಂಗ್ ಶುರುವಾಗಿದೆ. ಗ್ರಾಹಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಜಿಯೋ ಗಿಗಾಪೈಬರ್ ಪ್ರಿವ್ಯೂ ಆಫರ್ ಶುರು ಮಾಡಿದೆ. ಈ ಆಫರ್ ನಲ್ಲಿ ಜಿಯೋ ಮೂರು ತಿಂಗಳ ಕಾಲ ಗ್ರಾಹಕರಿಗೆ ಟ್ರಯಲ್ ನೀಡ್ತಿದೆ. ಗ್ರಾಹಕರಿಗೆ ನ್ಯೂನ್ಯತೆ ಮತ್ತು ಅನುಕೂಲದ ಬಗ್ಗೆ ತಿಳಿಯಲಿ ಎನ್ನುವ ಕಾರಣಕ್ಕೆ ಜಿಯೋ ಈ ಆಫರ್ ನೀಡ್ತಿದೆ.

ಜಿಯೋ ಗಿಗಾಫೈಬರ್ ಪ್ರಿವ್ಯೂ ಆಫರ್ ನಲ್ಲಿ 90 ದಿನಗಳ ಕಾಲ ಅಂದ್ರೆ 3 ತಿಂಗಳು 300 ಜಿಬಿ ಉಚಿತ ಡೇಟಾ ನೀಡ್ತಿದೆ. ಅಂದ್ರೆ ಪ್ರತಿ ತಿಂಗಳು ಗ್ರಾಹಕರಿಗೆ 100 ಜಿಬಿ ಡೇಟಾ ಸಿಗಲಿದೆ. ಪ್ರಿವ್ಯೂ ಆಫರ್ ಅಡಿ ಗ್ರಾಹಕರಿಗೆ 40 ಜಿಬಿ ಹೆಚ್ಚುವರಿ ಡೇಟಾ ಕೂಡ ಸಿಗಲಿದೆ. 300 ಜಿಬಿ ಡೇಟಾ ಖಾಲಿಯಾದ ಮೇಲೆ ಮೈ ಜಿಯೋ ಆ್ಯಪ್ ಗೆ ಹೋಗಿ 40 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ.

ಕಂಪನಿ ಪ್ರಕಾರ ಗಿಗಾ ಫೈಬರ್ ನ ಪ್ರಿವ್ಯೂ ಆಫರ್ ನಲ್ಲಿ ಗ್ರಾಹಕರಿಗೆ 1ಜಿಬಿಪಿಎಸ್ ವೇಗದಲ್ಲಿ ಡೇಟಾ ಲಭ್ಯವಾಗಲಿದೆಯಂತೆ. ಕಂಪನಿ ಗಿಗಾ ಫೈಬರ್ ನ ONT ಸಾಧನಕ್ಕಾಗಿ 4500 ರೂಪಾಯಿ ಭದ್ರತಾ ಠೇವಣಿ ಪಡೆಯಲಿದೆ. ಇದು ಮರುಪಾವತಿಯ ಮೊತ್ತವಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಜಿಯೋ ಮನಿ ಅಥವಾ ಪೇಟಿಎಂ ಮೂಲಕ ಪಾವತಿ ಮಾಡಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...